ಧಾರವಾಡ :
ಅಭಿನಯ ಭಾರತಿ ಮಹಾನಗರದ ಹಿರಿಯರಂಗ ಸಂಸ್ಥೆ ಅಭಿನಯ ಭಾರತಿ ಯು ರಂಗಾಯಣದ ಸಯೋಗದೊಂದಿಗೆ ವಿಶ್ವರಂಗಭೂಮಿ ದಿನಾಚರಣೆಯನ್ನು ಮಾರ್ಚ್ 27 ರಂದು ಬೆಳಿಗ್ಗೆ 10.30 ಗಂಟೆಗೆ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಏರ್ಪಡಿಸಿದೆ ಅಂದು ಅ ಅಭಿನಯ ಭಾರತಿ ರಂಗ ಪ್ರಶಸ್ತಿಯನ್ನು ಕಳೆದ 28 ವರ್ಷಗಳಿಂದ ನೀಡುತ್ತಿದ್ದು ಈ ಸಲ ಧಾರವಾಡದ ಉತ್ಸಾಹಿ ರಂಗಕರ್ಮಿ ರಂಗಸಂಘಟಕ ನಟ ಹಾಗೂ ನಿರ್ದೇಶಕ ವಿಜಯೇಂದೃ ಆಚ೯ಕ ಇವರಿಗೆ ನೀಡಲಾಗುತ್ತಿದೆ ಪ್ರಶಸ್ತಿಯು ನಟರಾಜ ವಿಗ್ರಹ ಪ್ರಶಸ್ತಿ ಫಲಕ ಹಾಗೂ 5,000 ನಗದು ಬಹುಮಾನವನ್ನು ಒಳಗೊಂಡಿದೆ
ಇದೇ ಸಂದರ್ಭದಲ್ಲಿ ಅಭಿನಯಭಾರತಿ ಮಾಸಿಕ ದತ್ತಿ ನಿಧಿಯ ಮೂರನೇ ತಿಂಗಳ ಉಪನ್ಯಾಸವನ್ನು ಮನೋಹರ್ ಗ್ರಂಥ ಮಾಲೆ ಹಾಗೂ ಸಂಯೋಗದೊಂದಿಗೆ ಏರ್ಪಡಿಸಲಾಗಿದ್ದು ಧಾರವಾಡದ ಹಿರಿಯ ವಿದ್ವಾಂಸ ಹಾಗೂ ಡಾಕ್ಟರ್ ಶ್ರೀರಾಮ್ ಭಟ್ ಅವರು,”ಸಂಸ್ಕೃತ ನಾಟಕಗಳಲ್ಲಿ ರಾಜಕೀಯ ಪ್ರಜ್ಞೆ,”ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ, ಈ ದತ್ತಿಯನ್ನು ಶ್ರೀಮತಿ ಆರತಿ ಅರವಿಂದ್ ಕುಲಕರ್ಣಿ ಅವರು ತಮ್ಮ ತಂದೆ ಹಾಗೂ ಹಿರಿಯ ಶಿಕ್ಷಣ ತಜ್ಞ ದಿ, ಪಾಂಡುರಂಗ ಮಳಗಿ ಇವರ ಸ್ಮರಣಾರ್ಥ ನೀಡಿದ್ದಾರೆ ವಿಶೇಷ ಅತಿಥಿಗಳಾಗಿ ಹಿರಿಯ ಪ್ರಾಧ್ಯಾಪಕ ಜಿಎಂ ಹೆಗಡೆ ಹಾಗೂ ರಂಗಾಯಣದ ಆಡಳಿತ ಅಧಿಕಾರಿಗಳಾದ ಶಶಿಕಲಾ ಹುಡೇದ ಅವರು ಭಾಗವಹಿಸಲಿದ್ದಾರೆ . ಅರವಿಂದ್ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರಧಾನ ಮಾಡುವರು,
ಧಾರವಾಡದ ರಂಗಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶ್ವ ರಂಗಭೂಮಿ ದಿನವನ್ನು ಸಾರ್ಥಕ ಗೊಳಿಸ ಬೇಕೆಂದು ಸಂಚಾಲಕ ಸಮೀರ್ ಜೋಶಿಯವರು ವಿನಂತಿಸುತ್ತಾರೆ,