ಹೋಳಿ ಆಡಿ ಸಂಭ್ರಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು .

Share
0Shares

ಧಾರವಾಡ 25 :
ಸಾಂಪ್ರದಾಯಿಕ ಹೋಳಿ ಹುಣ್ಣಿಮೆ ಹಬ್ಬದ ಸಡಗರ ಸಂಭ್ರಮ ಧಾರವಾಡದಲ್ಲಿ ಜೋರಾಗಿಯೇ ನಡೆದಿದ್ದು ಧಾರವಾಡ ಜಿಲ್ಲಾಡಳಿತದ ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಧಾರವಾಡ ನಗರದ ಕರ್ನಾಟಕ ರಾಜ್ಯ ನೌಕರರ ಸಂಘದ ಆವರಣದಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು , ಜಿಲ್ಲಾ ಆರೋಗ್ಯ ಅಧಿಕಾರಿ ಶಶಿ ಪಾಟೀಲ , ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್ ಸಿದ್ದನಗೌಡರ ಸೇರಿದಂತೆ ಹಲವರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬ ಆಚರಣೆ ಮಾಡಿದರು .                  ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಪುಠಾಣಿ ಮಕ್ಕಳು ಸಹ ಬಣ್ಣ ಹಚ್ಚಿ ಸಂಭ್ರಮಿಸಿದರು . ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಹಬ್ಬ ಸಡಗರಕ್ಕೆ ಇಮ್ಮಡಿಗೊಳಿಸಿದರು.
Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282