
ಧಾರವಾಡ :
ಮಾರ್ಚ 27 ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಕರ್ನಾಟಕದ ಪ್ರತಿಷ್ಠಿತ ತಂಡವಾದ ಅಭಿನಯ ಭಾರತಿ, ರಂಗಾಯಣ, ಧಾರವಾಡ ಜತೆ ಸೇರಿ ಇಡೀ ದಿನದುದ್ದಕ್ಕೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಮುಂಜಾನೆ 11ಕ್ಕೆ ರಂಗಾಯಣದ ಸಂಸ್ಕೃತಿ ಸಮುಚ್ಚಯದಲ್ಲಿ ಅಭಿನಯ ಭಾರತಿ ರಂಗ ಪ್ರಶಸ್ತಿ ಮತ್ತು ದಿ. ಪಾಂಡುರಂಗ ಮಳಗಿ ಅವರ ಸ್ಮರಣಾರ್ಥ ಸಂಸ್ಕೃತ ನಾಟಕ ಗಳಲ್ಲಿ ಕ್ಷಾತ್ರ ಧರ್ಮ ನಿರೂಪಣೆ ಮತ್ತು ನಂಬುಗೆಗಳು ರೂಪಗೊಂಡಿರುವ ಬಗ್ಗೆ ಹಲವಾರು ನಾಟಕಗಳ ಉದಾಹರಣೆ ನೀಡುತ್ತಾ ಡಾ. ಶ್ರೀರಾಮ್ ಭಟ್ ಅಧ್ಯಯನಶೀಲ ವಿಚಾರ ಮಂಡಿಸಿದರು.
ಆರಂಭದಲ್ಲಿ ಸುಶ್ರಾವ್ಯ ವಾಗಿ
ಪ್ರಾರ್ಥನೆಯನ್ನು ಕುಮಾರಿ ಅನನ್ಯ ಜೋತಪ್ಪನವರ ಹಾಡಿದರು, ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದ ಶಶಿಕಲಾ ಹುಡೇದ ರಂಗಾಯಣ ಆಡಳಿತ ಅಧಿಕಾರಿಗಳು ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲುಗೊಳ್ಬೇಕು ಅನ್ನುತ್ತ ಇಡೀ ದಿನದ ಕಾರ್ಯಕ್ರಮ ವಿವರ ನೀಡಿದರು.
ವಿಶ್ವ ರಂಗಭೂಮಿ ದಿನದ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಜಾನ್ ಫೋಸ್ಸೇ ಅವರು 2024 ಸಾಲಿನಲ್ಲಿ ನೀಡಿದ ರಂಗ ಸಂದೇಶದ ಕನ್ನಡ ಅನುವಾದದ ಸಂದೇಶ ವಾಚನವನ್ನು ಡಾ. ವಿ. ಟಿ ನಾಯಕ ವಾಚಿಸಿದರು.
ಪ್ರಶಸ್ತಿ ಸ್ವೀಕರಿಸಿದ ವಿಜಯೇಂದ್ರ ಅರ್ಚಕ ತಮ್ಮ ತಂದೆಯವರನ್ನ ಸ್ಮರಿಸುತ್ತ ತಾವು ಬೆಳೆದು ಬಂದ ಬಗೆ ಹೇಳುತ್ತಾ ಅಭಿನಯ ಭಾರತಿಗೆ ಕ್ರತಜ್ಞತೆ ಅರ್ಪಿಸಿದರು
ಅಧ್ಯಕ್ಷೀಯ ನುಡಿಗಳು ಆಡುತ್ತ ಅರವಿಂದ ಕುಲಕರ್ಣಿ ಶಶಿಕಲಾ ಹುಡೆದ ಅವರ ಪ್ರಯತ್ನದಿಂದ ಇಂದು ಐದು ಸಂಸ್ಥೆಗಳು ಕೂಡಿ ವಿಶ್ವ ರಂಗ ಭೂಮಿ ದಿನ ಆಚರಿಸತ್ತಿರುವದು ವಿಶೇಷ. .
ಕಾರ್ಯಕ್ರಮವನ್ನು ಜ್ಯೋತಿ ದೀಕ್ಷಿತ್ ನಿರೂಪಿಸಿದರು ,ಕೊನೆಗೆ ವೀರಣ್ಣ ಹೊಸಮನಿ ವಂದನಾರ್ಪಣೆ ಮಾಡಿದರು.