ಧಾರವಾಡ:--- ತಾಲೂಕಿನ ಮನಸೂರಿನಲ್ಲಿ ಇತ್ತೀಚೆಗಷ್ಟೆ ಆಕಳ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದ ಚಿರತೆ ಇನ್ನೂ ಸಿಕ್ಕಿಲ್ಲ . ನಿನ್ನೆ ತಡರಾತ್ರಿ ಮತ್ತೆ ಮೂರು ಕರುಗಳ ಮೇಲೆ ದಾಳಿ ಮಾಡಿ ಕರುಗಳನ್ನು ಸಾಯಿಸಿದೆ.
. ಆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ . ಚಿರತೆ ಮಾತ್ರ ಸೆರೆ ಸಿಕ್ಕಿಲ್ಲ . ಮನಸೂರು ಗ್ರಾಮದ ಜೋಶಿ ಫಾರ್ಮ್‌ಹೌಸ್‌ನಲ್ಲಿ ಕಟ್ಟಿದ್ದ ಕರುಗಳ ಮೇಲೆ ನಿನ್ನೆ ರಾತ್ರಿ ಚಿರತೆ ದಾಳಿ ಮಾಡಿದೆ . ಇದರಿಂದ ಎರಡು ಕರುಗಳು ಸಾವನ್ನಪ್ಪಿವೆ . ಘಟನಾ ಸ್ಥಳಕ್ಕೆ ಮತ್ತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಧಾರವಾಡ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನಸೂರ ಗ್ರಾಮಕ್ಕೆ ಬೇಟಿನೀಡಿ ಮುಂಜಾಗ್ರತೆ ವಹಿಸಲು ಹೇಳಿ ಶೀಘ್ರವೇ ಚಿರತೆ ಬಂಧಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.ಇಲ್ಲಿ ಗಮನಿಸಬಹುದು.
Share