ಧಾರವಾಡ 30 :
ಡಾ ಗುರುಲಿಂಗ ಕಾಪಸೆ : ಸಾಹಿತ್ಯ ಚಿಂತನ, ಸಂಸ್ಕರಣೆ ಮತ್ತು ‘ನೋಂಪಿವಲಯ’ ಗ್ರಂಥ ಬಿಡುಗಡೆ
ಈ ಎಲ್ಲ ಕಾರ್ಯಕ್ರಮಗಳು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ನಡೆಯಲಿವೆ. ಇದರಲ್ಲಿ, ಬೆಳಿಗ್ಗೆ 10.30ಕ್ಕೆ ಧಾರವಾಡದ ಅನುರಾಗ ಸಾಂಸ್ಕೃತಿಕ ಬಳಗದವರಿಂದ ವಚನ ಸಂಗೀತ, 11 ಗಂಟೆಗೆ ‘ಡಾ. ಗುರುಲಿಂಗ ಕಾಪಸೆ ಅವರ ಸಾಹಿತ್ಯ ಕೃತಿಗಳು’ ಈ ವಿಷಯ ಕುರಿತು ವಿಚಾರ ಸಂಕಿರಣ ಹಾಗೂ ಮಧ್ಯಾಹ್ನ 3 ಗಂಟೆಗೆ ‘ಡಾ. ಗುರುಲಿಂಗ ಕಾಪಸೆ ಸಂಸ್ಕರಣ ಮತ್ತು ‘ನೋಂಪಿವಲಯ” ಗ್ರಂಥ ಬಿಡುಗಡೆ-ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಡಾ ಬಸವರಾಜ ಸಾದರ ತಿಳಸಿದರು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಕನ್ನಡದ ಹಿರಿಯ ಸಾಹಿತಿ, ಅನುಭಾವಿ, ಚಿಂತಕ ಹಾಗೂ ಹೆಸರಾಂತ ಪ್ರಾಧ್ಯಾಪಕ ಡಾ. ಗುರುಲಿಂಗ ಕಾಪಸೆ ಅವರ ಸಾಹಿತ್ಯ ಕುರಿತ ಚರ್ಚೆ, ಸಂಸ್ಕರಣೆ ಮತ್ತು ‘ನೋಂಪಿವಲಯ’ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಮಂಗಳವಾರ,ಎಪ್ರಿಲ ದಿ. 2 ರಂದು ನಡೆಸಲು ಆಯೋಜಿಸಲಾಗಿದೆ. ಸಾಯಂಕಾಲ 5. 30 ಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಡಾ. ಗುರುಲಿಂಗ ಕಾಪಸೆ ಅವರ ಭಾವಗೀತೆಗಳ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು.
11 ಗಂಟೆಗೆ ನಡೆಯಲಿರುವ ‘ಡಾ. ಗುರುಲಿಂಗ ಕಾಪಸೆ ಅವರ ಸಾಹಿತ್ಯ ಕೃತಿಗಳು’ ಈ ವಿಷಯ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಕನ್ನಡದ ಹಿರಿಯ ಕವಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಅವರು ವಹಿಸಲಿದ್ದು, ಈ ಗೋಷ್ಠಿಯಲ್ಲಿ ಡಾ. ಶಾಂತಾ ಇಮ್ರಾಪೂರ, ಡಾ. ವಿ. ಎಸ್. ಮಾಳಿ, ಡಾ. ಸರಜೂ ಕಾಟಕರ ಹಾಗೂ ಡಾ. ಬಾಳಣ್ಣ ಸೀಗೀಹಳ್ಳಿ ಅವರು ವಿವಿಧ ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಮಧ್ಯಾಹ್ನ ಮೂರು ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸ
ಮಹಾಸಂಸ್ಥಾನಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿಜಯಪುರದ
ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು ‘ನೋಂಪಿವಲಯ’ ಗ್ರಂಥ ಬಿಡುಗಡೆ ಮಾಡಲಿದ್ದು, ಡಾ. ವೀರಣ್ಣ
ರಾಜೂರ ಅವರು ಸಂಸ್ಕರಣಾ ನುಡಿಗಳನ್ನು ಆಡಲಿದ್ದಾರೆ ಹಾಗೂ ‘ನೋಂಪಿವಲಯ’ ಗ್ರಂಥದ ಪರಿಚಯವನ್ನೂ ಮಾಡುತ್ತಾರೆ ಎಂದರು.
ಸಂಜೆ 5.30ಕ್ಕೆ ನಡೆಯುವ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಸಾದರ ಸಹೋದರಿಯರಾದ, ರಾಜೇಶ್ವರಿ ಸಾದರ ಮತ್ತು ಕವಿತಾ ಸಾದರ ಅವರು ಗಾಯನವನ್ನು ಪ್ರಸ್ತುತ ಪಡಿಸಲಿದ್ದು, ಇವರಿಗೆ ಹಾಕ್ಕೋನಿಯಂ ಸಾಥ ನೀಡುವವರು ಶ್ರೀ ಪ್ರಮೋದ ಹೆಬ್ಬಳ್ಳಿ ಹಾಗೂ ತಬಲಾ ಸಾಥಿ ನೀಡುವವರು ಶ್ರೀ ಆನಿಲ ಕೆ. ಮೇತ್ರಿ ಅವರು.
ಡಾ. ಗುರುಲಿಂಗ ಕಾಪಸೆ ಅವರಿಗೆ 95 ತುಂಬಿದ ಸಂದರ್ಭದಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮವು ಅವರು ಹುಟ್ಟಿದ ದಿನವಾದ ಏಪ್ರಿಲ್ 2 ರಂದು ಆಯೋಜಿತವಾಗಿರುವುದು ವಿಶೇಷ. ಈ ಮೊದಲಿನ ಯೋಜನೆಯಂತೆ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೂ ಇತ್ತು. ಆದರೆ ಮಾಚ೯
ದಿ 27 ರಂದು ಅವರು ನಿಧನರಾದ ಕಾರಣ, ಈಗ ಅನಿವಾರ್ಯವಾಗಿ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯುವಂತಾಗಿದೆ.
ಕಾರ್ಯಕ್ರಮವನ್ನು ಡಾ. ಗುರುಲಿಂಗ ಕಾಪಸೆ ಅವರ ಮಕ್ಕಳು ಮತ್ತು ಅವರ ವಿದ್ಯಾರ್ಥಿ ಬಳಗದವರು ಸಂಯುಕ್ತವಾಗಿ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತರು ಮತ್ತು ಡಾ. ಗುರುಲಿಂಗ ಕಾಪಸೆ ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಕೋರಲಾಗಿದೆ ಎಂದು ವಿನಂತಿಸಿದರು.
Share