ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆ ಇಂದು ಜಿಲ್ಲಾದ್ಯಂತ ಗಮನ ಸೆಳೆಯುತ್ತಿದೆ. ನೂತನವಾಗಿ ಅಧಿಕಾರ ವಹಿಸಿಕೊಂಡ ಬೇಳದಾಡಿ ಗ್ರಾಮದ ನಿವಾಸಿ ಶ್ರೀ ಮಹೇಶ ಹಡಪದ್ ಇವರ ಕಾರ್ಯ ಉತ್ತಮವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮೇಶ್ವರ ನಗರದಲ್ಲಿ ಈ ವರೆಗೂ ಯಾವ ಮುಖ್ಯಾಧಿಕಾರಿ ಕೈಗೆತ್ತಿಕೊಳ್ಳುವ ರಸ್ತೆ ನಿರ್ಮಾಣ, ನೀರಿನ ಸಮಸ್ಯೆ ಕುರಿತು ಕಾಮಗಾರಿಗಳು, ಲಕ್ಷ್ಮೇಶ್ವರ ಸ್ವಚ್ಚತೆಗೆ ಆದ್ಯತೆ, ಸೇರಿದಂತೆ ಲಕ್ಷ್ಮೇಶ್ವರ ಪುರಸಭೆಯ ಉಳಿತಾಯ ಬಜೆಟ್ ಮಂಡನೆ ಮಾಡುವಲ್ಲಿ ಶ್ರೀ ಮಹೇಶ್ ಹಡಪದ್ ರವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು ಈಗ ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಿದ್ದು ಮತ್ತೊಂದು ಉತ್ತಮ ಕಾರ್ಯವಾಗಿದೆ.
ಸುರಕ್ಷಾ ಪರಿಕರಗಳನ್ನು ವಿತಾರಿಸಿದ್ದು ಅದೇನು ಮಹಾ ಸಂಗತಿ ಎಂದು ಕೆಲವರು ಹೇಳಬಹುದು ಆದರೆ ಇತಿಹಾಸವನ್ನು ಕೆಣಕಿ ನೋಡಿದರೆ ಸುರಕ್ಷಾ ಪರಿಕರಗಳನ್ನು ನುಂಗಿದವರೆ ಹೆಚ್ಚು.
ಲಕ್ಷ್ಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ ಹಡಪದ್ ರವರು ಇನ್ನೂ ಹೆಚ್ಚೆಚ್ಚಾಗಿ ಸಾರ್ವಜನಿಕರ ಕೊರತೆಗಳನ್ನು ನಿಗಿಸಲಿ ಲಕ್ಷ್ಮೇಶ್ವರ ಪುರಸಭೆಯ ಮಾಧರಿ ಮುಖ್ಯಾಧಿಕಾರಿ ಆಗಲಿ ಎಂದು ಮಹಾ ಸುದ್ದಿ ಹಾರೈಕೆ.


