ಗದಗ ನಗರದ ತೋಂಟದಾರ್ಯ ಮಠದ ರಸ್ತೆಯಲ್ಲಿ ಗೋವಾ ಪಾಸಿಂಗ್ ಕಾರ್ ತಾಲೂಕ ಪಂಚಾಯತ್ ಇಲಾಖೆಯ ಸ್ಟಿಕ್ಕರ್ ಹಚ್ಚಿಕೊಂಡು ಓಡಾಡುತ್ತಿತ್ತು. ಅದನ್ನು ಗಮನಿಸಿದ ಮಹಾ ಸುದ್ದಿ ತಂಡ ಪ್ರಶ್ನಿಸಿದಾಗ ಹಠಾತ್ತನೆ ಕಾರ್ ಗೆ ಅಂಟಿಸಿದ ಸ್ಟಿಕ್ಕರ್ ಕಿತ್ತುಕೊಂಡು ಸಮಜಾಯಿಷಿ ಕೊಡಲು ಆರಂಭಿಸಿದರು. ಪೊಲೀಸರಿಗೆ ಕರೆ ಮಾಡುವ ಮುನ್ನವೆ ಕಾರ್ ಅಲ್ಲಿಂದ ಹೊರಟು ಹೋಯಿತು.
ಚುನಾವಣಾ ನೀತಿ ಸಂಹಿತೆ ಇರುವ ಸಮಯದಲ್ಲಿ ಗೋವಾ ಪಾಸಿಂಗ್ ಕಾರ್ ತಾಲೂಕ ಪಂಚಾಯತ್ ಸ್ಟಿಕ್ಕರ್ ಹಚ್ಚಿಕೊಂಡು ಓಡಾಡುತ್ತಿರುವುದು ಅನುಮಾನಕ್ಕೆ ಗುರಿ ಮಾಡಿದೆ.
ಸದರಿ ವಾಹನವನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಲು ಮಾನ್ಯ ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗಕ್ಕೆ ಮಹಸುದ್ದಿ ವಿನಂತಿ.
