ಮುಂಡರಗಿ* : ಗಂಡನೊಬ್ಬ ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ವುಮೇನ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಬೇಲೂರಪ್ಪ ಪೂಜಾರ ಹಲ್ಲೆ ಒಳಗಾದ ಮಹಿಳೆ. ಗಂಡ ಬೇಲೂರಪ್ಪ ಹುಚ್ಚಪ್ಪ ಪೂಜಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಂಡತಿಗೆ ಕಂದಿಲಿಯಿಂದ ಹೊಡೆದಿದ್ದು, ಮಾತ್ರವಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿತೊಡಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದಿದ್ದ ಗೀತಾಳನ್ನು ನೋಡಿ ಸಾರ್ವಜನಿಕರು ಹೆದರತೊಡಗಿದರು. ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದಿದ್ದ ಗೀತಾಳ ಪಕ್ಕದಲ್ಲಿಯೇ ಗಂಡ ಕಂದಿಲಿ ಹಿಡಿದು ನಿಂತಿದ್ದನು.
ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಸಾರ್ವಜನಿಕರು ಪೊಲೀಸ್ ಜೀಪಿನಲ್ಲಿ ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ
ಮುಂಡರಗಿ ತಾಲೂಕು ಮಹಾಸುದ್ದಿ ವರದಿಗಾರರು A N Kelur 9591817982