
ಗದುಗಿನದ್ದು ಕ್ರಾಂತಿಕಾರಿ ನಡೆಯಾಗಿತ್ತು ಒಂದಾನೊಂದು ಕಾಲದಲ್ಲಿ ಗದಗ ಶಿಕ್ಷಣಕ್ಕೆ ಹೆಸರುವಾಸಿ ಆದರೆ ಇತ್ತೀಚಿನ ದಿನಗಳನ್ನು ಅವಲೋಕನ ಮಾಡಿಕೊಳ್ಳುವಾಗ ಗದಗ ಶಿಕ್ಷಣ ಇಲಾಖೆ ತನ್ನ ತಿರುಳನ್ನು ಕಳೆದುಕೊಂಡಿದೆ.
ಇಂದು ನಡೆದ ಪಿಯುಸಿ ಫಲಿತಾಂಶ ನೋಡುವಾಗ ಗದಗ ಕೊನೆಯ ಸ್ಥಾನದಲ್ಲಿದೆ ನಿಜವಾಗ್ಲೂ ಕೂಡ ಗದಗಿನ ಶಿಕ್ಷಣ ಪದ್ಧತಿಯನ್ನು ಹೇಗೆ ಹೊಗಳಬೇಕು ಎಂದು ಗೊತ್ತಾಗ್ತಾ ಇಲ್ಲ.
ಅನೈತಿಕ ಶಿಕ್ಷಣ ಪದ್ಧತಿ, ಭ್ರಷ್ಟಾಚಾರದಿಂದ ತುಂಬಿದ ಶಿಕ್ಷಣ ಪದ್ಧತಿ, ಸಂಬಳಕ್ಕಾಗಿ ಕೆಲಸ ಮಾಡುವ ಶಿಕ್ಷಕರು ಕೆಲಸ ಮಾಡದೆ ಇದ್ರೂ ಪರವಾಗಿಲ್ಲ ನಾವು ಏನು ತೆಗೆದುಕೊಳ್ಳುವುದಿಲ್ಲ ಎಂದು ಸುಮ್ಮನೆ ಮುಚ್ಚಿಕೊಂಡು ಕುಳಿತುಕೊಂಡ ಶಿಕ್ಷಣ ಇಲಾಖೆ
ಇಂತಹ ವ್ಯವಸ್ಥೆಯ ಗದುಗಿನ ಶಿಕ್ಷಣ ಪದ್ಧತಿ ಗದುಗಿನ ಶಿಕ್ಷಣವನ್ನು ಅತ್ಯಂತ ಕೊನೆಯ ಸ್ಥಾನಕ್ಕೆ ತಂದಿದ್ದರಲ್ಲಿ ಹೊಸತೇನಲ್ಲ ಬಿಡಿ.
ಅಂತೂ ಇಂತೂ ಇಡೀ ರಾಜ್ಯದಲ್ಲಿ ಗದಗೇ ಲಾಸ್ಟ ಎಂಬುದು ಸಾಬೀತಾಯಿತು ಉತ್ತಮ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವುದನ್ನು ಬಿಟ್ಟು, ಪಾಠದ ಮೇಲೆ ಗಮನ ಕೊಡಬೇಡಿ, ಹೇಗೋ ನಮಗೆ ಫೀಸ್ ಮಾತ್ರ ಕೊಡಿ ಮೂವತ್ತೈದು ಬಿದ್ದರೆ ಪಾಸು…. ಎಂಬಂತೆ ಪಾಠಗಳನ್ನು ಮಾಡುವ ಶಿಕ್ಷಣ ಇಲಾಖೆ ಇಂದು ಗದುಗಿನ ಮಾನ ಹರಾಜು ಹಾಕಿದೆ.