ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 133 ನೇಯ ಜಯಂತಿ ಅಂಗವಾಗಿ ಇಂದು ಬೆಟಗೇರಿಯಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಯಂತಿಯನ್ನು ಆಚರಿಸಲಾಯಿತು.
ಡಾಕ್ಟರ್ ಬಾಬಾಸಾಹೇಬರ ತ್ಯಾಗ ಬಲಿದಾನದಿಂದ ನಮಗೆ ಕೊಟ್ಟ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಬದುಕುತ್ತಿದ್ದೇವೆ ನಾವು ಬಾಬಾಸಾಹೇಬರ ತೋರಿಸಿದ ದಾರಿಯಲ್ಲಿ ನಡೆಯಬೇಕಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಭಿಮಾನಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ M A ಕುರ್ತಕೋಟಿ ಹೇಳಿದರು.
ಕಾರ್ಯಕ್ರಮದಲ್ಲಿ ಬೆಟಗೇರಿ ನಗರ ಅಧ್ಯಕ್ಷರಾದ ಶ್ರೀ ಪ್ರಕಾಶ ಗಾರವಾಡ, ಉಪಾಧ್ಯಕ್ಷರಾದ ಶ್ರೀ ವೀರೇಶ ಗೋಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ ಕುಲಕರ್ಣಿ, ಶ್ರೀ ಬಶೀರ್ ಮುಳಗುಂದ, ಇಮಾಮಸಾಬ ನಮಾಜಿ, ಉಸ್ಮಾನ್ ಮಾಲೆಕೊಪ್ಪ, ಮುತ್ತಪ್ಪ ಇಟಗಿ ಮುಂತಾದವರು ಉಪಸ್ಥಿತರಿದ್ದರು.