FASTNEWS
MAY 18, 2024

ಶಿರಸಿ: ಆಟವಾಡುತ್ತಿದ್ದ ಬಾಲಕನೋರ್ವ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಬನವಾಸಿಯಲ್ಲಿ ಸಂಜೆ ನಡೆದಿದೆ.
ಸಾಜೀದ್ ಅಷ್ಪಾಕ್ ಅಲಿ ಶೇಖ್ (17) ಮೃತ ಬಾಲಕ. ಸ್ನೇಹಿತರ ಜತೆಗೂಡಿ ಇಲ್ಲಿನ ಜಯಂತಿ ಪ್ರೌಢಶಾಲೆ ಸಮೀಪದ ಬಯಲಿನಲ್ಲಿ ಕ್ರಿಕೆಟ್ ಆಡುವ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಅಬ್ಬರಕ್ಕೆ ಭಯಗೊಂಡ ಸ್ನೇಹಿತರು ದೂರ ಓಡಿದ್ದು, ಅಷ್ಫಾಕ್ ಅಲಿ ಅಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತನ ಪ್ರಾಣ ಹೋಗಿದ್ದನ್ನು ವೈದ್ಯರು ದೃಢೀಕರಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share