FASTNEWS
MAY 19, 2024

ಹುಬ್ಬಳ್ಳಿ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತಮ್ಮ ಮನೆಯಲ್ಲಿ ಕೊಲೆಗೀಡಾದ ಯುವತಿ ಅಂಜಲಿ ಅಂಬಿಗೇರ್ ಅಗಲಿಕೆಯ ನೋವಿನಿಂದ ಬಳಲುತ್ತಿರುವ ತಂಗಿ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದರುವ ಘಟನೆ ನಡೆದಿದೆ.
ಅಕ್ಕ ಅಂಜಲಿ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ತಂಗಿ ಯಶೋಧಾ ಅವರು ಮನೆಯಲ್ಲಿಯೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಕುರಿತು ಅವರ ಅಜ್ಜಿ ಗಂಗಮ್ಮ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾಹಿತಿ ನೀಡಿದ್ದಾರೆ.ಯಶೋಧಾ ಅಂಜಲಿ ಸಾವಿನಿಂದ ತೀರಾ ನೊಂದಿದ್ದಾಳೆ. ಮಾನಸಿಕವಾಗಿ ಕುಸಿದು ಹೋಗಿದ್ದು, ಫಿನಾಯಿಲ್ ಸೇವಿಸಿದ್ದಾಳೆ. ಮ್ಮೊಡನೆ ಇಡೀ ಸಮಾಜ ನಿಂತಿದೆ. ಆದರೂ ಪೊಲೀಸರು ಆರೋಪಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆತನನ್ನು ಗುಣಮುಖನನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದರು.
Share