ಇಂದಿನಿಂದ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜೂನಿಯರ್ ವಿಭಾಗದಲ್ಲಿ ನಮ್ಮ ಗದಗ ಕ್ರಿಕೆಟರ್ಸ್ ತಂಡ

Share
0Shares

ಪ್ರಶಸ್ತಿಗೆ ಸಣಸಲಿರುವ 8 ತಂಡಗಳು: 12 ಲೀಗ್, ಸೆಮಿಫೈನಲ್ ಸೇರಿದಂತೆ 18 ಪಂದ್ಯಗಳು : ಮೇ 20 ರಿಂದ ಪ್ರಾರಂಭ 25 ರಂದು ಫೈನಲ್ ಪಂದ್ಯ

ಗದಗ: ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ನಡೆಯುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜೂನಿಯರ್ 5 ನೇ ಆವೃತ್ತಿ ಮೇ 20 ರಿಂದ ಪ್ರಾರಂಭವಾಗಿ ಮೇ 25 ರವರೆಗೆ ಹುಬ್ಬಳ್ಳಿಯ ಕೆಎಸ್ ಸಿ ಎ ಹಾಗೂ ಆರ್ ಐ ಎಸ್ ಮೈದಾನದಲ್ಲಿ ಜರುಗಲಿದ್ದು, ಈ ಮಹತ್ವದ ಪಂದ್ಯಾವಳಿಯಲ್ಲಿ ನಮ್ಮ ಗದಗ ಕ್ರಿಕೆಟರ್ಸ್ ತಂಡ ಬಿಡ್ಡಿಂಗ್ ಮೂಲಕ ಯುವ ಪ್ರತಿಭಾನ್ವಿತ ಆಟಗಾರರನ್ನು ಪಡೆದುಕೊಂಡು ಭಾಗವಹಿಸುತ್ತಿದ್ದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದ್ದು ಬೆಳೆಯುವ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿದೆ.

ಈಗಾಗಲೇ ಸೀನಿಯರ್ ಆಟಗಾರರಿಗಾಗಿ ಸಾಕಷ್ಟು ಟೂರ್ನಿಗಳು ನಡೆಯುತ್ತಿದ್ದು, ಆದರೆ ಕಿರಿಯ ಪ್ರತಿಭಾವಂತ ಕ್ರಿಕೆಟ್ ಪಟುಗಳಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಲು ಪ್ರತಿ ವರ್ಷ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ಜೂನಿಯರ್ ಆಯೋಜಿಸಲಾಗುತ್ತಿದ್ದು, ಈಗಾಗಲೇ ಹಲವಾರು ಹೊಸ ಪ್ರತಿಭೆಗಳು ಹೊರ ಹೊಮ್ಮಿದ್ದು, ಅಂತಹ ಪ್ರತಿಭೆಗಳಿಗೆ ಈ ವರ್ಷದ ಪಂದ್ಯಾವಳಿ ಕೂಡಾ ಉತ್ತಮ ವೇದಿಕೆಯಾಗಲಿದೆ.

ಟೂರ್ನಿಯು ಪ್ರಾರಂಭದಲ್ಲಿ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ನಂತರ ಅರ್ಹತೆ ಪಡೆದ ನಾಲ್ಕು ತಂಡಗಳು ಎಚ್‌ಪಿಎಲ್ ಜೂನಿಯರ್ ಪ್ರಶಸ್ತಿಗಾಗಿ ಸೆಣಸಲಿವೆ. ಸಂಘಟಕರಾದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ರವರು, ಅತ್ಯಂತ ಅಚ್ಚುಕಟ್ಟಾಗಿ ಜೂನಿಯರ್ ಆಟಗಾರರ ಬಿಡ್ಡಿಂಗ್ ಪ್ರಕ್ರಿಕೆಯ ಪೂರ್ಣಗೊಳಿಸಿದ್ದು, ಮೊದಲ ಮ್ಯಾಚ್ ದಿನವೇ ಪ್ರತಿ ತಂಡಕ್ಕೂ ಜರ್ಸಿ ಕೂಡಾ ನೀಡಲಿದ್ದಾರೆ.

ನಮ್ಮ ಗದಗ ಕ್ರಿಕೆಟರ್ಸ್ ತಂಡದ ಮಾಲೀಕ ಮಲ್ಲಿಕಾರ್ಜುನ ಭೂಪಾನಿ ಹಾಗೂ ತಂಡದವರು ಬಿಡ್ಡಿಂಗ್‌ನಲ್ಲಿ ಭಾಗವಹಿಸಿ ಗದುಗಿನ ಪ್ರತಿಭಾವಂತ ಕ್ರೀಡಾಪಟುಗಳು ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯ ಒಟ್ಟು 17 ಯುವ ಆಟಗಾರರನ್ನು ಅಂಕಗಳ ಆಧಾರದ ಆಯ್ಕೆ ಮಾಡಲಾಗಿದೆ.

ನಮ್ಮ ಗದಗ ಕ್ರಿಕೆಟರ್ಸ್ ತಂಡದಲ್ಲಿ ಪ್ರೀತಂ ಸುಂಕಾಪೂರ, ಸ್ವರೂಪ ಸಚಿನ್, ಆರುಷ್ ಪುಥಾರಣ, ಮನೀಷ್ ನರನುರ, ಕ್ರಧನ್ ಕುಲಕರ್ಣಿ, ಆರ್ಯನ್ ಮೆರವಾಡೆ, ಸಂಕೇತ ಕುಷ್ಟಗಿ, ಅಮೂಲ್ ಸಂತೋಷ, ಆರ್ಯನ್ ಪಿ, ಬೆನಕಾ ಹೊಸಮನಿ, ಚಂದ್ರಣ್ಣ ಮನಗುಂಡಿ, ನಿತಿನ್ ಬದಿ, ಪ್ರಸಾದ ಉನ್ನಿಮಠ, ಸಮರ್ಥ ನುಗ್ಗಿಕೇರಿ, ಸುಜಲ್ ಬಸಂತಿ, ಹರ್ಷಾ ಶಾಂಕೆ, ಮೊಹ್ಮದಮೊಯಿನ್ ಮುಲ್ಲಾ ಆಡಲಿದ್ದಾರೆ. ಬಿಸಿಸಿಐ ಲೆವೆಲ್-1 ಅಂಪೈರ್ ಹಾಗೂ ಬಿಸಿಸಿಐನ ಲೆವೆಲ್-ಓ ಕೋಚ್ ಆಗಿರುವ, ಮಲ್ಲಿಕಾರ್ಜುನ ಭೂಪಾನಿ, ನಮ್ಮ ಗದಗ ಕ್ರಿಕೆಟರ್ಸ್ ತಂಡದ ಮಾಲೀಕರಾಗಿದ್ದಾರೆ. ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ಹಿರಿಯ ಕ್ರಿಕೆಟ್ ಪಟು ವೀರಣ್ಣ ಜಾನೋಪಂತರ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹುಬ್ಬಳ್ಳಿಯ ಮಂಜುನಾಥ ಕಾಳೆ ತಂಡದ ತರಬೇತುದಾರರಾಗಿದ್ದಾರೆ ಎಂದು ನಮ್ಮ ಗದಗ ಕ್ರಿಕೆಟರ್ಸ್ ತಂಡದ ಮೇಲ್ವಿಚಾರಕ ಶಿವಕುಮಾರ ಕುಷ್ಟಗಿ ತಿಳಿಸಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282