FAST NEWS
MAY 21, 2024

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿಯಂದು ಅವರನ್ನು ಸ್ಮರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಗಲಿದ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಂದೆಯ ಕುರಿತಂತೆ ‘ಎಕ್ಸ್’ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಅಪ್ಪ.. ಒಂದು ಸ್ಪೂರ್ತಿಯಾಗಿ ನನ್ನ ನೆನಪುಗಳಲ್ಲಿ ಯಾವಾಗಲೂ ನೀವು ಇದ್ದೀರಿ’ ಎಂದು ಬರೆದುಕೊಂಡಿದ್ದಾರೆ. ನಿಮ್ಮ ಕನಸುಗಳೆಲ್ಲವೂ ನನ್ನ ಕನಸುಗಳು. ನಿಮ್ಮ ಆಕಾಂಕ್ಷೆಗಳೆಲ್ಲವೂ ನನ್ನ ಜವಾಬ್ದಾರಿಗಳು. ನಿಮ್ಮ ನೆನಪುಗಳು, ಇಂದು ಎಂದೆಂದಿಗೂ ನನ್ನ ಹೃದಯದಲ್ಲಿ ಇರುತ್ತದೆ’ ಎಂದು ಹೇಳಿದ್ದಾರೆ.
Share