FAST NEWS
MAY 21, 2024

ಮೈಸೂರು: ಕಲುಷಿತ ನೀರು ಸೇವಿಸಿ ಯುವಕ ಮೃತಪಟ್ಟಿದ್ದಾರೆ.
ಕೆ.ಸಾಲುಂಡಿ ಗ್ರಾಮದ ನಿವಾಸಿ ಕನಕರಾಜು (22) ಮೃತಪಟ್ಟರು.
ತೀವ್ರ ವಾಂತಿ, ಭೇದಿಯಿಂದಾಗಿ ಅವರು ಸೋಮವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಔಷಧಿ ಪಡೆದು ಮರಳಿದ್ದರು. ಸಂಜೆಯ ವೇಳೆಗೆ ಮತ್ತಷ್ಟು ಸಮಸ್ಯೆಯಾದಾಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೂಲಗಳು ತಿಳಿಸಿವೆ.