ಕೇವಲ 159 ರನ್ಸ್‌ಗೆ ಆಲೌಟ್‌ ಆದ ಸನ್‌ರೈಸರ್ಸ್‌ ಹೈದರಾಬಾದ್‌

Share
0Shares

FASTNEWS

MAY 21, 2024

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿದ್ದ ಸನ್‌ರೈಸರ್ಸ್‌ ತಂಡಕ್ಕೆ ಮೊದಲ ಓವರ್‌ನಿಂದಲೇ ಕೆಕೆಆರ್‌ ಪ್ರತಿರೋಧ‌ ಒಡ್ಡುವಲ್ಲಿ ಯಶಸ್ಸಾಗಿದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆದರೂ ಕೆಕೆಆರ್‌ ತಂಡದ ಶಿಸ್ತಿನ ಬೌಲಿಂಗ್‌ ಮುಂದೆ ರನ್‌ ಗಳಿಸಲು ತಿಣುಕಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಕೇವಲ 159 ರನ್‌ಗೆ ಆಲೌಟ್‌ ಆಗಿದೆ.

ಆರಂಭಿಕ ಆಟಗಾರ ಟ್ರಾವಿಡ್‌ ಹೆಡ್‌ ಅವರನ್ನು ಮೊದಲ ಓವರ್‌ನಲ್ಲಿಯೇ ಕಳೆದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬ್ಯಾಟಿಂಗ್‌ ಕೊನೆಯವರೆಗೂ ಲಯಕ್ಕೆ ಬರಲೇ ಇಲ್ಲ. ರನ್‌ರೇಟ್‌ ಉತ್ತಮವಾಗಿದ್ದರೂ, ಅಬ್ಬರದ ಆಟವಾಡುವ ಪ್ರಯತ್ನದಲ್ಲಿ ಕೆಕೆಆರ್‌ ಬೌಲರ್‌ಗಳಿಗೆ ವಿಕೆಟ್‌ ಒಪ್ಪಿಸುತ್ತಲೇ ಸಾಗಿದರು. ಅನುಭವಿ ವೇಗಿ ಮಿಚೆಲ್‌ ಸ್ಟಾರ್ಕ್‌ ಪ್ರಮುಖ ಪಂದ್ಯದಲ್ಲಿ ಮೂರು ಪ್ರಮುಖ ವಿಕೆಟ್‌ ಉರುಳಿಸಿದರು.

130ರ ಒಳಗಿನ ಮೊತ್ತಕ್ಕೆ ಆಲೌಟ್‌ ಆಗುವ ಅಪಾಯ ಎದುರಿಸಿದ್ದ ಸನ್‌ರೈಸರ್ಸ್‌ ತಂಡಕ್ಕೆ ಕೊನೆಯ ವಿಕೆಟ್‌ಗೆ ನಾಯಕ ಪ್ಯಾಟ್‌ ಕಮ್ಮಿನ್ಸ್‌ ಕೆಲ ರನ್‌ ಗಳಿಸಿ ತಂಡ 159 ರನ್‌ ಗಳಿಸಲು ಕಾರಣರಾದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282