FASTNEWS
MAY 27, 2024

ಅಹಮದಾಬಾದ್: 27 ಮಂದಿಯ ಸಾವಿಗೆ ಕಾರಣವಾದ ರಾಜ್ ಕೋಟ್ ಗೇಮ್ ಝೋನ್ ಅಗ್ನಿ ದುರಂತ ಪ್ರಕರಣದ ಸಂಬಂಧ 6 ಅಧಿಕಾರಿಗಳನ್ನು ಅಮಾನತು ಮಾಡಿ ಗುಜರಾತ್ ಸರ್ಕಾರ ಆದೇಶಿಸಿದೆ.
ಅಗತ್ಯ ಅನುಮೋದನೆ ಇಲ್ಲದೆ ಗೇಮ್ ಝೋನ್ ಕಾರ್ಯಾಚರಿಸಲು ಅವಕಾಶ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯ’ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಕೋಟ್ ಪಾಲಿಕೆಯ ನಗರ ಯೋಜನೆ ವಿಭಾಗದ ಸಹ ಎಂಜಿನಿಯರ್ ಜೈದೀಪ್ ಚೌಧರಿ, ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಗೌತಮ್ ಜೋಶಿ, ರಾಜ್ಕೋಟ್ ರಸ್ತೆ ಹಾಗೂ ಕಟ್ಟಡ ವಿಭಾಗದ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಗಳಾದ ಎಂ.ಆರ್.ಸುಮಾ ಹಾಗೂ ಪರಾಸ್ ಕೊತಿಯಾ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ವಿ.ಆರ್ ಪಟೇಲ್ ಹಾಗೂ ಎನ್.ಐ ರಾಥೋಡ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Share