FASTNEWS
MAY 30, 2024

ನವದೆಹಲಿ: ಪ್ರಧಾನಿ ಹುದ್ದೆಯ ಗೌರವಕ್ಕೆ ಚ್ಯುತಿ ತಂದ ಮೊದಲ ಪ್ರಧಾನಿ ಮೋದಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಸಿದ್ದಾರೆ.
ಕಳೆದ ತಿಂಗಳು ರಾಜಸ್ಥಾನದಲ್ಲಿ ಚುನಾವಣಾ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮ್ಮ ಆಸ್ತಿಯನ್ನು ಕಸಿದುಕೊಂಡು ಹೆಚ್ಚು ಮಕ್ಕಳಿರುವವರಿಗೆ ಹಂಚುವುದಾಗಿ ಹೇಳಿದೆ. ಈ ದೇಶದ ಪ್ರಧಾನಿಯಾಗಿದ್ದವು ಹಿಂದೊಮ್ಮೆ ದೇಶದ ಸಂಪತ್ತಿನ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು ಎಂದಿದ್ದರು’ ಎಂದು ಟೀಕಾ ಪ್ರಹಾರ ನಡೆಸಿದ್ದರು. ಈ ಮೂಲಕ ಮನಮೋಹನ್ ಸಿಂಗ್ ಅವರಿಗೂ ಟಾಂಗ್ ಕೊಟ್ಟಿದ್ದರು.
ಈಗ ಅದೇ ವಿಚಾರವಾಗಿ ಮನಮೋಹನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ‘ಚುನಾವಣೆ ಸಂದರ್ಭದಲ್ಲಿ ಬಂದತಂಹ ಹೇಳಿಕೆಗಳನ್ನು ನಾನು ಎಚ್ಚರಿಕೆಯಿಂದ ಗಮನಿಸುತ್ತಿದ್ದೆ. ಮೋದಿ ಸದಾ ಧ್ವೇಷದ ಬೀಜ ಬಿತ್ತುವ ಭಾಷಣಗಳನ್ನು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಹುದ್ದೆಗೆ ಅದರದ್ದೇ ಆದ ಗಾಂಭೀರ್ಯತೆಯಿದೆ. ಆದರೆ ಮೋದಿ ಆ ಹುದ್ದೆಯ ಗೌರವಕ್ಕೆ ಚ್ಯುತಿ ತಂದ ಮೊದಲ ವ್ಯಕ್ತಿ. ಒಬ್ಬ ಪ್ರಧಾನಿ ಎಂಬುದನ್ನೂ ಮರೆತು ಅವರು ವಿಪಕ್ಷಗಳ ವಿರುದ್ಧ ಅತ್ಯಂತ ಕೀಳುಮಟ್ಟದ ಟೀಕೆ ಮಾಡುತ್ತಾ ಬಂದಿದ್ದಾರೆ. ನಾನು ಪ್ರಧಾನಿಯಾಗಿದ್ದಾಗ ಯಾವತ್ತೂ ಒಂದು ಸಮುದಾಯವನ್ನು ಕಡೆಗಣಿಸಿ ಮತ್ತೊಂದು ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ’ ಎಂದಿದ್ದಾರೆ.
Share