FASTNEWS
MAY 31, 2024

ಹಾಸನ: ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ ಎಂದು ಹೇಳಿದ್ದೇವೆ. ತನಿಖೆಯಿಂದ ಸಂಪೂರ್ಣ ಉತ್ತರ ಹೊರ ಬರಲಿ. ನಮ್ಮ ಪಕ್ಷ ನೂರಕ್ಕೆ ನೂರು ಸಂತ್ರಸ್ತೆಯರ ಪರವಾಗಿ ಇರಲಿದೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಎಚ್.ಟಿ. ಕುಮಾರಸ್ವಾಮಿ ಮೊದಲೇ ಹೇಳಿದ್ದರು. ಪ್ರಜ್ವಲ್ ರೇವಣ್ಣ ಜೊತೆಗೆ ಪೆನ್ಡ್ರೈವ್ ಹಂಚಿದವರ ಬಂಧನವೂ ಆಗಬೇಕು ಎಂದು ಒತ್ತಾಯಿಸಿದರು.
Share