FASTNEWS
JUNE 2, 2024

ಉತ್ತರ ಪ್ರದೇಶ: ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ಕುಳಿತ್ತಿದ್ದವರ ಮೇಲೆ ಪಿಕಪ್ ವಾಹನ ಹರಿದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಕೊತ್ವಾಲಿ ಬಿಸೌಲಿ ಪ್ರದೇಶದ ಪೈಗಂ ಭಿಕಂಪುರ ಗ್ರಾಮದಲ್ಲಿ ನಡೆದಿದೆ.
ರಾಮ್ ಸಿಂಗ್ ಅವರ ಪುತ್ರ ಪ್ರಕಾಶ್ (42), ಮೋಹನ್ ಲಾಲ್ ಅವರ ಪುತ್ರ ಬ್ರಹ್ಮಪಾಲ್ (35), ಶ್ಯಾಮಲಾಲ್ ಅವರ ಪುತ್ರ ಧನಪಾಲ್ (55), ಶ್ಯಾಮಲಾಲ್ ಅವರ ಪುತ್ರ ಜ್ಞಾನ್ ಸಿಂಗ್ (40) ಮೃತಪಟ್ಟವರು.
ತೀವ್ರ ಬಿಸಿಲಿನಿಂದಾಗಿ ಸುಮಾರು 6 ಜನರು ಪೀಪಲ್ ಮರದ ಕೆಳಗೆ ನಿರ್ಮಿಸಲಾಗಿದ್ದ ಟೆಂಟ್‍ನಲ್ಲಿ ಕುಳಿತುಕೊಂಡಿದ್ದರು. ಈ ವೇಳೆ ಅನಿಯಂತ್ರಿತ ಪಿಕಪ್ ವಾಹನ ಹರಿದಿದೆ. ಸ್ಥಳದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Share