ಎಸ್ಐಟಿ ಅಧಿಕಾರಿಗಳನ್ನು ಬೆದರಿಸುತ್ತಿರುವ ಪ್ರಜ್ವಲ್ ರೇವಣ್ಣ

Share
0Shares

FASTNEWS

JUNE 3, 2024

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪಿ ಪ್ರಜ್ಚಲ್ ರೇವಣ್ಣ ತನಿಖೆ ಮಾಡುವವರನ್ನೇ ಬೆದರಿಸುವಂತೆ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ನೀಡಲಾಗುವುದು. ಏಕಾಏಕಿ ಪ್ರಕರಣ ದಾಖಲಿಸಿದರೆ, ನಾವೇ ದುರುದ್ದೇಶದಿಂದ ಪ್ರಕರಣ ದಾಖಲಿಸಿದಂತಾಗುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಮೂಲಗಳು ಹೇಳಿವೆಯೆಂದು ತಿಳಿದುಬಂದಿದೆ.

ಅರಮನೆ ರಸ್ತೆಯಲ್ಲಿರುವ ಸಿಐಡಿ ಕೇಂದ್ರ ಕಚೇರಿಯ ಅದರ ಸೆಲ್‌ನಲ್ಲಿ ಪ್ರಜ್ವಲ್‌ನ್ನು ಎಸ್‌ಐಟಿ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಆದರೆ, ತಮ್ಮ ಮೇಲಿನ ಅತ್ಯಾಚಾರ ಆರೋಪಗಳನ್ನು ಅವರು ನಿರಾಕರಿಸುತ್ತಿದ್ದಾರೆ, ತನಿಖಾಧಿಕಾರಿಗಳಿಗೆನೇ ಮರಪ್ರಶ್ನಿಸುತ್ತಿದ್ದಾರೆ. ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್‌ ಅವರನ್ನು ಆರು ದಿನ ವಿಚಾರಣೆ ಸಲುವಾಗಿ ಎಸ್‌ಐಟಿ ವಶಕ್ಕೆ ಪಡೆದಿದ್ದು, ಮೊದಲ ದಿನದ ವಿಚಾರಣೆಗೆ ನಿರೀಕ್ಷಿತ ರೀತಿಯಲ್ಲಿ ಅವರು ಸಹಕರಿಸಿಲ್ಲ. ಎರಡು ದಿನಗಳ ವಿಚಾರಣೆ ಬಳಿಕ ಅವರನ್ನು ಘಟನಾ ಸ್ಥಳಗಳ ಮಹಜರು ಸಲುವಾಗಿ ಹಾಸನಕ್ಕೆ ಕರೆದೊಯ್ಯುಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282