FASTNEWS
JUNE 3, 2024

ಬೆಂಗಳೂರು: ಧಾರಾಕಾರ ಮಳೆಗೆ ಬಿಎಂಟಿಸಿ ಬಸ್ ಅರ್ಧ ಮುಳುಗಿದ ಘಟನೆ ನಗರದ ಕೀನೋ ಥಿಯೇಟರ್ ಅಂಡರ್ ಪಾಸ್ ನಲ್ಲಿ ನಡೆದಿದೆ.
ಮಲ್ಲೇಶ್ವರಂ ಲಿಂಕ್ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಬರುತ್ತಿದ್ದ ಬಸ್ ಅಂಡರ್ ಪಾಸ್ ನಲ್ಲಿದ್ದ ಮಳೆಗೆ ಕೆಟ್ಟು ನಿಂತಿತ್ತು. ಇದರಿಂದ ಪ್ರಯಾಣಿಕರು ಕೆಲಹೊತ್ತು ಪರದಾಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಿ ಬಳಿಕ ಮತ್ತೊಂದು ಬಸ್ಸಿನಿಂದ ಕಳುಹಿಸಿಕೊಡಲಾಯಿತು.
Share