FASTNEWS
JUNE 3, 2024

ನವದೆಹಲಿ: ಇಂದಿನಿಂದ ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ 3-5%ರಷ್ಟು ಹೆಚ್ಚಳವಾಗಲಿದೆ.
ಲೋಕಸಭಾ ಚುನಾವಣೆ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ವಾರ್ಷಿಕ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ನೀತಿ ಸಂಹಿತೆ ಕಾರಣ ತಡೆಹಿಡಿಯಲಾದ ಬಳಕೆದಾರರ ಶುಲ್ಕ ದರಗಳ ಪರಿಷ್ಕರಣೆಯು ಜೂನ್ 3 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಹೆಚ್ಚಿನ ಹೊರೆ
ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಅಶೋಕ್ ಬಿಲ್ಡ್‌ಕಾನ್ ಲಿಮಿಟೆಡ್‌ನಂತಹ ಟೋಲ್ ಪ್ಲಾಜಾಗಳನ್ನು ನಿರ್ವಹಣೆ ಮಾಡುವವರು ಹೆಚ್ಚಿನ ಲಾಭ ಪಡೆಯಲಿದ್ದಾರೆ.
ಭಾರತ ಕಳೆದ ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಣೆ ಮತ್ತು ಅಭಿವೃದ್ಧಿಗೆ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದೆ, ಸುಮಾರು 146,000 ಕಿಲೋಮೀಟರ್‌ಗಳಷ್ಟು ಹೆದ್ದಾರಿ ನಿರ್ಮಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಟೋಲ್ ಶುಲ್ಕಗಳು ಮತ್ತು ಇಂಧನ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳವು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿರೋಧ ಪಕ್ಷಗಳು ಮತ್ತು ಅನೇಕ ವಾಹನ ಚಾಲಕರು ವಾರ್ಷಿಕ ಶುಲ್ಕಗಳ ಏರಿಕೆಯಿಂದ ಕೋಪಗೊಂಡಿದ್ದಾರೆ. ಟೋಲ್ ದರ ಹೆಚ್ಚಳದಿಂದ ಅಗತ್ಯ ಸರಕುಗಳ ಸಾರಿಗೆ ವೆಚ್ಚ ಹೆಚ್ಚಾಗುತ್ತದೆ ಮತ್ತು ಪ್ರಯಾಣಿಕರಿಗೆ ಹೊರೆಯಾಗಿದೆ ಎಂದು ಹೇಳಿದರು.
2018/19 ರಲ್ಲಿ 252 ಶತಕೋಟಿಯಿಂದ 2022/23 ಹಣಕಾಸು ವರ್ಷದಲ್ಲಿ 540 ಶತಕೋಟಿ ರೂಪಾಯಿಗಳಿಗೆ ಟೋಲ್ ಸಂಗ್ರಹಣೆ ಹೆಚ್ಚಿದೆ.
Share