FASTNEWS
JUNE 8, 2024

ನವದೆಹಲಿ: ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಆಹಾರ ಸಂಸ್ಕರಣಾ ಘಟಕದಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ತೊಗರಿ ಬೇಳೆ ಅನ್ನು ಗ್ಯಾಸ್ ಬರ್ನರ್ ಗಳ ಮೇಲೆ ಹುರಿಯಲಾಗಿದೆ ಮತ್ತು ಪೈಪ್ ಲೈನ್ ಗಳಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರಿಗೆ ಮುಂಜಾನೆ 3.35ಕ್ಕೆ ಕರೆ ಬಂದಿದ್ದು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Share