FASTNEWS
JUNE 26, 2024

ಸೈರೋಬಿ: ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆಯೂ ಕೀನ್ಯಾದ ಸಂಸತ್ತಿನಲ್ಲಿ ಮಂಗಳವಾರ ನೂತನ ತೆರಿಗೆ ನೀತಿ ಮಸೂದೆಗೆ ಅಂಗೀಕಾರ ದೊರೆತಿದ್ದು, ಬಳಿಕ ನಡೆದ ಹಿಂಸಾಚಾರದಲ್ಲಿ ಸಂಸತ್ ಸಂಕೀರ್ಣಕ್ಕೆ ಪ್ರತಿಭಟನಕಾರರು ಮುತ್ತಿಗೆ ಹಾಕಿ, ಸಂಸತ್ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಭದ್ರತಾಪಡೆ ನಡೆಸಿದ ಗೋಲಿಬಾರ್ 10 ಮಂದಿ ಮೃತಪಟ್ಟಿದ್ದಾರೆ.
ಸಂಸತ್ ಕಟ್ಟಡ ಹೊತ್ತಿ ಉರಿಯುತ್ತಿರುವ ವೀಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೀವನ ನಿರ್ವಹಣೆಯೇ ಕಷ್ಟದಲ್ಲಿರುವಾಗ ನೂತನ ನೀತಿ ತೆರಿಗೆ ಹೆಚ್ಚಳ ಜನರನ್ನು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಸುತ್ತದೆ ಎಂದು ಕೀನ್ಯಾದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
Share