FASTNEWS
JUNE 29, 2024

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮತ್ತೊಮ್ಮೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಒಟ್ಟು 13ಕ್ಷೇತ್ರಗಳ ಪೈಕಿ ಒಂದು ಬಿಜೆಪಿ ಹಾಗು ಒಂದು ರಾಷ್ಟ್ರ ಭಕ್ತರ ಬಳಗ ಗೆಲುವು ಪಡೆದುಕೊಂಡಿದೆ ಉಳಿದ 11ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಬಿಜೆಪಿಯಿಂದ ಶಿಕಾರಿಪುರದ ಡಿ.ಎಲ್.ಬಸವರಾಜ್ ಮಾತ್ರ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಬಿಜೆಪಿ ಪೈಪೋಟಿ ಮಧ್ಯ ಸ್ಪರ್ಧೆ ಮಾಡಿದ್ದ ಕೆ ಎಸ್.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗದ ಮಹಾಲಿಂಗಶಾಸ್ತ್ರಿ ಅವರು ಗೆಲುವಿನ ನಗೆ ಬೀರಿದ್ದಾರೆ.
ಬಿಜೆಪಿ ಕೇವಲ ಒಂದೇ ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರರಿಗೆ ಮುಖಭಂಗವಾಗಿದೆ.
Share