FASTNEWS
JUNE 29, 2024

ಉಜಿರೆ: ಬೆಂಝ್ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ವಾಹನ ಚಾಲಕ ಮೃತಪಟ್ಟಿರುವ ಘಟನೆ ಕಾಲೇಜು ರಸ್ತೆಯ ಬೆಳಾಲು ಕ್ರಾಸ್ ಹತ್ತಿರ ಇಂದು (ಜೂ.29) ರ ಮುಂಜಾನೆ ನಡೆದಿದೆ.
ಮೃತರನ್ನು ಬೆಳ್ತಂಗಡಿಯ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕ ಪ್ರಮೋದ್ ಆರ್ ನಾಯಕ್ ಅವರ ಪುತ್ರ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಅನಿಯಂತ್ರಿತ ವೇಗದಲ್ಲಿ ಬಂದ ಚಾಲಕ ಪ್ರಜ್ವಲ್ ಕಾರನ್ನು ನಿಯಂತ್ರಿಸಲಾಗದೆ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಪ್ರಜ್ವಲ್ ಅವರು ಉಜಿರೆಯ ಡಿ.ಎಂ ಗೌಡ ಕಾಂಪ್ಲೆಕ್ಸ್‌ನಲ್ಲಿ ಗೇಮಿಂಗ್ ಶಾಪ್ ಮಾಲೀಕರಾಗಿದ್ದು, ಇಂದು ಬೆಳಿಗ್ಗೆ ಅವರು ಅಲ್ಲಿಗೆ ಹೋಗುವ ಸಂದರ್ಭದಲ್ಲಿ ಈ ಭೀಕರ ಅಪಘಾತ ನಡೆದಿದೆ
Share