FASTNEWS
JULY 9, 2024

ಬೆಂಗಳೂರು: ಕನ್ನಡದ ಖ್ಯಾತ ನಿರ್ಮಾಪಕ ಕೆ. ಮಂಜು ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ಇಂದು ಭೇಟಿಯಾಗಿ ಬಂದಿದ್ದು, ನಟ ದರ್ಶನ್ ಮಾಡದೇ ಇರುವ ತಪ್ಪಿಗೆ ಜೈಲು ಶಿಕ್ಷೆ ಆಗುತ್ತಿದೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಒಳ್ಳೆಯದಾಗುತ್ತೆ, ದೇವರಿದ್ದಾನೆ ಎಂದರು. ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಹೌದು, ನಟ ದರ್ಶನ್ ನೋವಿನಲ್ಲಿದ್ದಾರೆ. ಮಾಡದೇ ಇರುವ ತಪ್ಪಿಗೆ ಜೈಲು ಶಿಕ್ಷೆ ಆಗುತ್ತಿದೆ. ಏನೋ ಘಟನೆ ಆಗಿದೆ, ಆದರೆ ಅದು ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ ಅಲ್ಲ ಎಂದಿದ್ದಾರೆ.
ನಟ ದರ್ಶನ್ ಅವರು ಕೊಲೆ ಮಾಡಿಲ್ವಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ‘ದರ್ಶನ್ ತಾವು ಕೊಲೆ ಮಾಡಿಲ್ಲ, ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ’ ಎಂದಿದ್ದಾರೆ. ಹೇಗೂ ಪ್ರಕರಣ ಪೊಲೀಸ್ ತನಿಖೆಯಲ್ಲಿದೆ. ಕಾನೂನಿನ ಮೇಲೆ ನಮಗೂ ಅವರಿಗೂ ನಂಬಿಕೆಯಿದೆ. ಸತ್ಯ ಆಚೆ ಬರುತ್ತೆ, ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿದ್ದಾರೆಎಂದಿದ್ದಾರೆ.
ಬೇರೆ ಏನೇನು ಮಾತನಾಡಿದಿರಿ ಎಂಬ ಪ್ರಶ್ನೆಗೆ, ಎಲ್ಲವನ್ನು ಹೇಳಲಿಕ್ಕೆ ಆಗುವುದಿಲ್ಲ. ನಮ್ಮ ವೈಯಕ್ತಿಕ ಮಾತುಗಳೂ ಇರುತ್ತವೆಯಲ್ಲ ಎಂದಿದ್ದಾರೆ.
Share