ನೇಪಾಳದಲ್ಲಿ ಭೂಕುಸಿತ: 63 ಮಂದಿ ಮೃತ

Share
0Shares

FASTNEWS

JULY 12, 2024

ಕಠ್ಮಂಡು: ಮಧ್ಯ ನೇಪಾಳದ ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಭಾರಿ ಭೂಕುಸಿತ ಸಂಭವಿಸಿದೆ. ಎರಡು ಬಸ್ಸುಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದು ಸುಮಾರು 63 ಪ್ರಯಾಣಿಕರು ಮೃತರಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡೂ ಬಸ್ಸುಗಳಲ್ಲಿ ಬಸ್ ಚಾಲಕರು ಸೇರಿದಂತೆ ಒಟ್ಟು 63 ಜನರು ಇದ್ದರು.

ಮುಂಜಾನೆ 3.30ರ ಸುಮಾರಿಗೆ ಭೂಕುಸಿತವಾಗಿ ಬಸ್ಸುಗಳು ಕೊಚ್ಚಿಕೊಂಡು ಹೋಯಿತು. ನಾವು ಘಟನಾ ಸ್ಥಳದಲ್ಲಿದ್ದೇವೆ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾದ ಬಸ್ಸುಗಳನ್ನು, ಜನರನ್ನು ಹುಡುಕುವ ನಮ್ಮ ಪ್ರಯತ್ನಗಳಿಗೆ ನಿರಂತರ ಮಳೆ ಅಡ್ಡಿಯಾಗಿದೆ ಎಂದು ಚಿಟ್ವಾನ್ನ ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಎಎನ್‌ಐಗೆ ತಿಳಿಸಿದ್ದಾಗಿ ವರದಿಯಾಗಿದೆ.

ನೇಪಾಳದ ಪ್ರಧಾನಿ ಪುಷ್ಪಾ ಕಮಲ್ ದಹಲ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿ, ನಾರಾಯಣಘಡ್-ಮುಗ್ಲಿನ್ ರಸ್ತೆ ವಿಭಾಗದಲ್ಲಿ ಭೂಕುಸಿತದಿಂದ ಬಸ್ ಕೊಚ್ಚಿಹೋಗಿದ್ದು, ಪ್ರವಾಹದಿಂದಾಗಿ ಆಸ್ತಿಪಾಸ್ತಿಗಳ ನಷ್ಟದಿಂದ ಸುಮಾರು ಐದು ಡಜನ್ ಪ್ರಯಾಣಿಕರು ಕಾಣೆಯಾದ ವರದಿಗಳಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದೇಶದ ವಿವಿಧ ಭಾಗಗಳಲ್ಲಿ ಭೂಕುಸಿತಗಳು ಸಂಭವಿಸಿದಾಗ, ಪ್ರಯಾಣಿಕರನ್ನು ಹುಡುಕಲು ಮತ್ತು ಪರಿಣಾಮಕಾರಿಯಾಗಿ ರಕ್ಷಿಸಲು ಗೃಹ ಆಡಳಿತ ಸೇರಿದಂತೆ ಸರ್ಕಾರದ ಎಲ್ಲಾ ಏಜೆನ್ಸಿಗಳಿಗೆ ನಾನು ನಿರ್ದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282