FASTNEWS
JULY 12, 2024

ಮೈಸೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಬ್ಯಾಂಕಿನಿಂದಲೇ ಹಣ ವರ್ಗಾವಣೆಯಾಗಿದೆ. ಹಾಗಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಾಲ್ಮೀಕಿ ಹಗರಣದಲ್ಲಿ ಹಣಕಾಸು ಸಚಿವರಾಗಿರುವ ಸಿಎಂ ಸಿದ್ದರಾಮಯ್ಯರವರ ಗಮನಕ್ಕೆ ಬಾರದೇ ಹಣ ವರ್ಗಾವಣೆಯಾಗಿಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ಅವರು ರಾಜೀನಾಮೆ ಕೊಡಬೇಕೆಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆಗೆ ಸಿಎಂ ಮೈಸೂರಿನಲ್ಲಿ ಹೀಗೆ ಪ್ರತಿಕ್ರಿಯಿಸಿದರು.
ಖಜಾನೆಯಿಂದ ಎಲ್ಲವೂ ನನ್ನ ಮೂಲಕವೇ ನಡೆಯುವುದಿಲ್ಲ. ಎಲ್ಲದಕ್ಕೂ ನಾನು ಸಹಿ ಹಾಕುವುದಿಲ್ಲ. ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಹಣ ವರ್ಗಾವಣೆ ಬ್ಯಾಂಕಿನಿಂದ ನಡೆದಿದೆ. ಹಾಗೆಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿ ಕಾರಣ ಎನ್ನಲಾದೀತೇ? ಅವರು ರಾಜೀನಾಮೆ ಕೊಡುತ್ತಾರಾ ಎಂದು ಸುದ್ದಿಗಾರರಿಗೆ ಸಿಎಂ ಪ್ರಶ್ನಿಸಿದರು.
Share