ಗಾಝಾದಲ್ಲಿ ಇಸ್ರೇಲ್ ದಾಳಿ: ಕನಿಷ್ಠ 30 ಸಾವು

Share
0Shares

FASTNEWS

JULY 12, 2024

ಗಾಝಾ: ಗುರುವಾರ ಗಾಝಾ ನಗರದ ಹಲವು ಮನೆಗಳು ಮತ್ತು ಕಟ್ಟಡಗಳ ಮೇಲೆ‌ ನಡೆಸಿದ ದಾಳಿಯಿಂದಾಗಿ ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿ ಹಲವರು ಸಿಕ್ಕಿಬಿದ್ದಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ಗಾಝಾ ನಗರದ ಟೆಲ್ ಅಲ್-ಹವಾ ಮತ್ತು ಸಬ್ರಾ ಜಿಲ್ಲೆಗಳಲ್ಲಿ ಇಸ್ರೇಲ್ ದಾಳಿಯಿಂದಾಗಿ ಕುಸಿದು ಬಿದ್ದಿರುವ ಮನೆಗಳಡಿ ಹಲವರು ಸಿಕ್ಕಿಬಿದ್ದಿದ್ದು, ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಯುತ್ತಿರುವುದರಿಂದ ಈ ಪ್ರದೇಶವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈಜಿಪ್ಟ್ ಗಡಿಭಾಗದ ಬಳಿಯ ರಫಾ ನಗರದಲ್ಲಿ ಇಸ್ರೇಲ್ ಸೇನೆ ಹಲವು ಮನೆಗಳನ್ನು ಸ್ಫೋಟಿಸಿದೆ. ಪಶ್ಚಿಮ ರಫಾದಲ್ಲಿನ ಟೆಲ್ ಅಲ್-ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲ್‍ ದಾಳಿಯಲ್ಲಿ ಮಗು ಸೇರಿದಂತೆ 4 ಮಂದಿ ಮೃತಪಟ್ಟಿರುವುದಾಗಿಯೂ ವರದಿಯಾಗಿದೆ.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282