FASTNEWS
JULY 19, 2024

ಗಂಗಾವತಿ: ರೈಲ್ವೆ ಟ್ರ್ಯಾಕ್ ಮೇಲೆ ಮದ್ಯಸೇವನೆ ಮಾಡಿ ಮಲಗಿದ್ದ ಮೂವರು ಯುವಕರ ಮೇಲೆ ರೈಲು ಹರಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಸಾವನ್ನಪ್ಪಿದ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಗಂಗಾವತಿ ನಗರದ ನಿವಾಸಿಗಳಾದ ಮೌನೇಶ್ ಪತ್ತಾರ (23), ಸುನೀಲ್ (23), ವೆಂಕಟ್ ಭೀಮನಾಯ್ಕ (20) ಮೃತ ಯುವಕರು.
ಮೂವರು ಯುವಕರು ಕಳೆದ ರಾತ್ರಿ ರೈಲ್ವೆ ಹಳಿ ಬಳಿಯೇ ಪಾರ್ಟಿ ಮಾಡಿ, ನಂತರ ಹಳಿ ಮೇಲೇ ಮಲಗಿದ್ದರು ಅಂತ ಹೇಳಲಾಗುತ್ತಿದೆ. ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Share