(ಜೀವವನ್ನು ಕೈಯಲ್ಲಿ ಇಡ್ಕೊಂಡು ಸಂಚರಿಸುತ್ತಿರುವ ವಾಹನ ಸವಾರರು )

ಹೌದು ಇದು ಗದಗ ತಾಲ್ಲೂಕಿನ ತಿಮ್ಮಾಪೂರ ಹಾಗೂ ಹರ್ಲಾಪೂರ ಗ್ರಾಮ ದಿಂದ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಈ ರಸ್ತೆಯು ಹಾವೇರಿ ಲೋಕಸಭಾ ಮತ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಾಗಿದ್ದು .
ಈ ರಸ್ತೆ ಹರ್ಲಾಪೂರ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 8 ಕಿಲೋವಮೀಟರ ಹಾಗೂ ತಿಮ್ಮಾಪೂರ ಗ್ರಾಮದಿಂದ ಯೆರೆಹಂಚಿನಾಳ ಗ್ರಾಮದ ಕಾಣೆಹಳದವರಗೆ 2 ಕೀಲೋಮೀಟರ ಒಟ್ಟು 10 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು ಇದ್ದು ಪಕ್ಕಾ ಪಿಡಬ್ಲ್ಯೂಡಿ ರಸ್ತೆ ಯಾಗಿದ್ದು ಈ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯೆ ಗುಂಡಿಗಳು ಬೀದ್ದು ಬಸ್ಸು , ಬೈಕ ,ಟಂಟಂ ಗೂಡ್ಸ್ ಗಾಡಿ ಆಟೋ ಇನ್ನೂ ಮುಂತಾದ ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಸಾರ್ವಜನಿಕರು ಹಾಗೂ ರೈತರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ .

ಈ ರಸ್ತೆ ಮೂಲಕ ನಿತ್ಯ ಗದಗ, ಕುಕನೂರು ನಗರಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ.
ಇಷ್ಟೆಲ್ಲ ವಾಹನಗಳು ಓಡಾಡಿದರು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುವುದಿಲ್ಲ.
ರೈತರು ಬೆಳೆದ ಮಾಲನ್ನು ಮಾರಾಟ ಮಾಡಲು ಗದಗ ಎಪಿಎಂಸಿಗೆ ಇದೆ ರಸ್ತೆ ಮೂಲಕ ನಿತ್ಯ ಸಂಚರಿಸುವರು .
ಪಿಡಬ್ಲ್ಯೂಡಿ ಇಲಾಖೆಯಿಂದ ತ್ಯಾಪಿ ಹಚ್ಚುವ ಕಾರ್ಯ
ವರ್ಷಕ್ಕೊಮ್ಮೆ ಪಿಡಬ್ಲ್ಯೂಡಿ ಇಲಾಖೆಯು ಈ ರಸ್ತೆಗೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ತ್ಯಾಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ .
ಒಂದೊಂದು ಕಿಲೋಮೀಟರಗೆ ಬರೋಬ್ಬರಿ 5 ಲಕ್ಷ ರೂಪಾಯಿಗಳು ವೇಚ ಮಾಡಿ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ.
.
ಒಂದರ ಮೇಲೊಂದು ತಗ್ಗು
ಇಲ್ಲಿಯ ರಸ್ತೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಾಣಸಿಗುವ ತಗ್ಗುಗಳು ಅದರ ನಡುವೆ ಜಟಕಾ ಬಂಡಿ ಯಂತೆ ಸಾಗುವ ದ್ವಿಚಕ್ರ ವಾಹನಗಳು ಒಂದು ತಗ್ಗು ಹೋಯಿತು ಅನ್ನುವಷ್ಟರಲ್ಲಿ ಮತ್ತೊಂದು ತಗ್ಗುಗಳು ಹೆಚ್ಚುತ್ತಾ ಹೋಗುತ್ತವೆ ವಿನ ಕಡಿಮೆಯಾಗುವುದಿಲ್ಲ.
ಹೀಗಾಗಿ ಈ ರಸ್ತೆಯಲ್ಲಿ ಅನೇಕ ಅಪಘಾತಗಳ ಸಂಭವಿಸಿದ್ದು ಹಲವಾರು ಸಾವು ಕೂಡ ಸಂಭವಿಸಿದೆ.

- ಹಲವು ಬಾರಿ ಮನವಿ
ಈ ರಸ್ತೆ ನಿರ್ಮಾಣ ಮಾಡುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಮೂಲಕ ಹಾಗೂ ಗ್ರಾಮ ಪಂಚಾಯಿತಿಯಿಂದ ಹಲವು ಬಾರಿ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು. ಏನು ಪ್ರಯೋಜನವಿಲ್ಲ ಎಂದು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಅವರು ತಿಳಿಸಿದ್ದಾರೆ.
ಇನ್ನೂ ಮುಂದಾದರು ಈ ರಸ್ತೆಗೆ ಕಾಯಕಲ್ಪ ನೀಡದಿದ್ದರೆ .
ಲೋಕೋಪಯೋಗಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ ಶರಣಪ್ಪ ಜೋಗಿನ ಶೇಖಪ್ಪ ಘಂಟಿ ರಾಮಣ್ಣ ಖಂಡ್ರಿ ಬಾಳಪ್ಪ ಗಂಗರಾತ್ರಿ ಅಂದಪ್ಪ ಕೂಳುರು ಇನ್ನೂ ಮುಂತಾದ ರೈತ ಮುಖಂಡರು ಒತ್ತಾಯಿಸಿದ್ದಾರೆ.