FAST NEWS
AUGUST 29, 2024

ಮಂಗಳೂರು: ಎಂಎಲ್ ಸಿ ಐವನ್ ಡಿಸೋಜಾ ಮನೆಗೆ ಕಲ್ಲು ಎಸೆದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಸಂಘಪರಿವಾರದ ಕಾರ್ಯಕರ್ತ ಎನ್ನಲಾದವರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬೋಳಂತೂರು ನಾರಾಯಣ ಕೋಡಿಯ ಭರತ್ ಯಾನೆ ಯಕ್ಷಿತ್ (24) ಮತ್ತು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿಯ ದಿನೇಶ್ ಕುಡ್ತಮುಗೇರು (20) ಬಂಧಿತ ಆರೋಪಿಗಳು
ಬಂಧಿತರಿಬ್ಬರೂ ವಿಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಎಂದು ಹೇಳಲಾಗಿದೆ.
ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯವನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಬುಧವಾರ ರಾತ್ರಿ ಸುಮಾರು 11.20ರ ಸುಮಾರಿಗೆ ಬೈಕ್ ನಲ್ಲಿ ಹೆಲ್ಮೆಟ್ ಹಾಕಿ ಬಂದ ಇಬ್ಬರು ಕಿಡಿಗೇಡಿಗಳು ಐವನ್ ಮನೆಗೆ ಎರ್ರಾಬಿರ್ರಿ ಕಲ್ಲುತೂರಾಟ ನಡೆಸಿ, ಪರಾರಿಯಾಗಿದ್ದರು. ಇದರಿಂದ ಐವನ್ ಮನೆಯ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ.
Share