FAST NEWS
AUGUST 29, 2024

ಬಳ್ಳಾರಿ: ನಟ ದರ್ಶನ್ ಅವರನ್ನು ಬಳ್ಳಾರಿಗೆ ಕರೆತಂದಾಗ ಜೈಲಿಗೆ ಸಂಪರ್ಕಿಸುವ ರಸ್ತೆಯಲ್ಲಿ ಅಭಿಮಾನಿಗಳು ಸೇರಿಕೊಂಡಿದ್ದರು.
ದರ್ಶನ್ ಅವರನ್ನು ನೋಡಬಹುದು ಎಂಬ ನಿರೀಕ್ಷೆ ಮೇರೆಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕಾರಾಗೃಹದ ಮುಂದೆ ನೆರೆದಿದ್ದರು.
ನಟನನ್ನು ನೋಡಲು ಬಳ್ಳಾರಿಯ ಜನ ರಸ್ತೆಗಳಲ್ಲಿ ನೆರೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು
ಜನರನ್ನು ರಸ್ತೆಗಳಿಂದ ದೂರ ಸರಿಸಲು ಬಳ್ಳಾರಿ ಪೊಲೀಸರು ಹರಸಾಹಸ ಪಡಬೇಕಾಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ವಿಚಾರ ಬಯಲಾಯಿತು. ಆನಂತರ ಆರೋಪಿಗಳನ್ನು ಬೇರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದರು. ಪೊಲೀಸರ ಮನವಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆಗಸ್ಟ್ 29 ರಂದು ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.