FAST NEWS
AUGUST 30, 2024

ನವದೆಹಲಿ: ರಾಜ್ ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಅವರ ಪ್ರತಿಮೆ ಕುಸಿತವಾಗಿರುವುದಕ್ಕೆ ಪ್ರಧಾನಿ ಮೋದಿ ಕ್ಷಮೆಯಾಚಿಸಿದ್ದಾರೆ.
ನಾನು ಇಲ್ಲಿಗೆ ಬಂದಿಳಿದ ಕ್ಷಣದಲ್ಲಿ, ಪ್ರತಿಮೆ ಕುಸಿತದ ಬಗ್ಗೆ ನಾನು ಮೊದಲು ಛತ್ರಪತಿ ಶಿವಾಜಿ ಬಳಿ ಕ್ಷಮೆಯಾಚಿಸಿದೆ.
ಪ್ರತಿಮೆ ಕುಸಿತದಿಂದ ನೊಂದಿರುವ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸುವವರು ಮತ್ತು ಘಟನೆಯಿಂದ ತೀವ್ರವಾಗಿ ನೊಂದಿರುವವರ ಬಳಿ ನಾನು ತಲೆಬಾಗಿ ಕ್ಷಮೆಯಾಚಿಸುತ್ತೇನೆ. ನಮ್ಮ ಮೌಲ್ಯಗಳು ವಿಭಿನ್ನವಾಗಿವೆ. ಇದಕ್ಕಿಂತ ದೊಡ್ಡದು ಏನು ಇಲ್ಲ ಎಂದು ಮೋದಿ ತಿಳಿಸಿದ್ದಾರೆ.
Share