FASTNEWS
SEPTEMBER 27, 2024

ಆಗ್ರಾ: ಶಾಲೆಯೊಂದರ ಏಳಿಗೆಗಾಗಿ ಎರಡನೇ ತರಗತಿಯ ವಿದ್ಯಾರ್ಥಿಯನ್ನು ಅದರ ಮಾಲೀಕ ಬಲಿ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಶಾಲೆಯ ನಿರ್ದೇಶಕ, ಮಾಲೀಕ, ಪ್ರಾಂಶುಪಾಲ ಹಾಗೂ ಇಬ್ಬರು ಶಿಕ್ಷಕರನನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊಲೆಗೀಡಾದ ವಿದ್ಯಾರ್ಥಿ ಕೃತಾರ್ಥ್ (11) ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ಹಾಥ್ರಸ್ ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಡಿ.ಎಲ್ ಪಬ್ಲಿಕ್ ಸ್ಕೂಲ್ ನ ಮಾಲೀಕನಾದ ಜಸೋಧನ್ ಸಿಂಗ್ಗೆ ‘ತಂತ್ರ ಆಚರಣೆ’ಗಳ ಬಗ್ಗೆ ನಂಬಿಕೆಯಿದ್ದು, ಶಾಲೆ ಹಾಗೂ ಆತನ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಮಗುವನ್ನು ಬಲಿಕೊಡಬೇಕು ಎಂದು ಪುತ್ರ ಹಾಗೂ ಶಾಲೆಯ ನಿರ್ದೇಶಕ ದಿನೇಶ್ ಬಘೇಲ್ ಗೆ ಹೇಳಿದ್ದ. ಈ ಕೃತ್ಯಕ್ಕೆ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್, ಶಿಕ್ಷಕರಾದ ರಾಮಪ್ರಕಾಶ ಸೋಲಂಕಿ ಹಾಗೂ ವೀರ್ ಪಾಲ್ ಸಿಂಗ್ ಸಹಾಯ ಮಾಡಿದ್ದರು.
ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.