ಗಂಗಾವತಿ: ಸ್ಥಳೀಯ ಶಾಸಕರಾದ ಜಿ.ಜನಾರ್ದನ ರೆಡ್ಡಿಯವರು
ರಂಗಾಪುರ, ಜಂಗ್ಲಿ, ಚಿಕ್ಕರಾಂಪುರ ಶಾಲಾ ಮಕ್ಕಳಿಗಾಗಿ ತಮ್ಮ ಸ್ವಂತ ಹಣದಲ್ಲಿ ಶಾಲಾ ಬಸ್ಸು ಖರೀದಿಸಿ ಕೊಟ್ಟಿದ್ದಾರೆ.ಶಾಲಾ ಮಕ್ಕಳ ಬಗ್ಗೆ ಅವರಿಗಿರುವ ಕಾಳಜಿ ಅಭಿನಂದನಾರ್ಹವಾದದ್ದು. ಸೋಮವಾರ ದಿನಾಂಕ 21-10-2024 ರ ಬೆಳಿಗ್ಗೆ 8.00 ಗಂಟೆಗೆ ರಂಗಾಪುರ (ಜಂಗ್ಲಿ) ಗ್ರಾಮದಲ್ಲಿ ಶಾಸಕರಾದ ಜನಾರ್ದನ ರೆಡ್ಡಿಯವರು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾರವರು ಹೊಸ ಶಾಲಾ ಬಸ್ಸಿಗೆ ಚಾಲನೆ ಕೊಡಲಿದ್ದಾರೆ.
ಕಾರಣ ಆನೆಗೊಂದಿ ಭಾಗದ ಪಕ್ಷದ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸಿ ಈ ಸಾಮಾಜಿಕ ಕಾರ್ಯ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.