ಅಕ್ಟೋಬರ್ 22.1958 ರಲ್ಲಿ ಬೆಳಗಾವಿ ಜಿಲ್ಲೆ ಆಚಮಟ್ಟಿ ಗ್ರಾಮದಲ್ಲಿ ಜನನ.ತಂದೆ ಚನ್ನಪ್ಪಗೌಡ ತಾಯಿ ಮಲ್ಲಮ್ಮ ನವರ ಉದರದಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಮಧ್ಯೆ ನಿಂತು ಜನಪರ ಕಾರ್ಯಗಳನ್ನು ಮಾಡುವದರ ಜೊತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾ ಒಳ್ಳೆಯ ಯುವ ನಾಯಕರಾಗಿ ಹೊರಹೊಮ್ಮಿದರು.ಸಣ್ಣ ವಯಸ್ಸಿನಲ್ಲಿಯೇ ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡುತ್ತಾ ಸಾರ್ವಜನಿಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದರು.ಇವರು ಬೆಳಗಾವಿ ಜಿಲ್ಲೆಯವರಾದರೂ ಸಹಿತ ನರಗುಂದ ಪಕ್ಕ ಆಚಮಟ್ಟಿ ಇವರ ಗ್ರಾಮವಾಗಿರುವದರಿಂದ ನರಗುಂದ ಮತಕ್ಷೇತ್ರದ ಜನರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರು ಅಷ್ಟೇ ಅಲ್ಲದೇ ರೈತರಿಗೆ ವರದಾನವಾದ ಮಹದಾಯಿ ನದಿ ನೀರನ್ನು ಕರ್ನಾಟಕದ ನಮ್ಮ ಭಾಗದ ರೈತರಿಗೆ ಪೂರೈಸುವಂತೆ ನಡೆದ ಬ್ರಹತ್ ಮಟ್ಟದ ಹೋರಾಟದ ಮುಂಚೂಣಿ ನಾಯಕರಾಗಿ ರೈತರ ಪರ ಬೀದಿಗಿಳಿದು ಪಾದಯಾತ್ರೆಗೆ ಮುಂದಾದರು .ಆದಕಾರಣ ಇವರ ಕಾರ್ಯವೈಖರಿ ಜನಪರ ಖಾಳಜಿಯನ್ನ ಮೆಚ್ಚಿ ನರಗುಂದ ಮತಕ್ಷೇತ್ರದ ಜನತೆ ನರಗುಂದ ವಿಧಾನಸಭಾ ಮತಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರು.
ಆದಕಾರಣ 2014ರ ವಿಧಾನಸಭಾ ಚುನಾವಣೆಯಲ್ಲಿ ನರಗುಂದ ಮತಕ್ಷೇತ್ರದಿಂದ ಸ್ಪರ್ಧಿಸಿ ವಿಜಯಶಾಲಿಯಾದರು. 2014ರಲ್ಲಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಸುಮಾರು ವರ್ಷಗಳಿಂದ ಜಟೀಲ ಸಮಸ್ಯೆಯಾಗಿ ಉಳಿದ ಕೆಲವು ಕಾಮಗಾರಿಗಳನ್ನು ಸವಾಲಾಗಿ ತೆಗೆದುಕೊಂಡರು.ಉದಾಹರಣೆಗೆ ನರಗುಂದ ಮತಕ್ಷೇತ್ರದ ಬಳಗಾನೂರ ಗ್ರಾಮದ ರೈತರ ಜಮೀನುಗಳಿಗೆ ತೆರಳುವ (ಬೆಳವಣಕಿ ಒಳ) ರಸ್ತೆಯಲ್ಲಿ ಒಂದೇ ಚಕ್ಕಡಿ ಹೋಗುವದು ಕೂಡಾ ತುಂಬಾ ಕಷ್ಟಕರವಾಗಿತ್ತು.ಎದರಿಗೆ ಯಾವುದಾದರೂ ಚಕ್ಕಡಿ ಅಥವಾ ಟ್ರ್ಯಾಕ್ಟರ್ ಬಂದರೆ ಸೈಡ್ ತೆಗೆದುಕೊಳ್ಳಲು ಜಾಗವಿರಲಿಲ್ಲ.ಹೆಮ್ಮರವಾಗಿ ಬೆಳೆದುನಿಂತ ಜಾಲಿ ಕಂಠಿಗಳು ಸೈಡ್ ತೆಗೆದುಕೊಳ್ಳಲು ಹೋಗಿ ಸಾಕಷ್ಟು ರೈತರ ಚಕ್ಕಡಿಗಳು ಬಿದ್ದು ಬಹಳ ತೊಂದರೆಯನ್ನು ಅನುಭವಿಸಿದ್ದಾರೆ.ಅಂತಹ ಜಟೀಲವಾದ ಸಮಸ್ಯೆಯನ್ನ ಸವಲಾಗಿ ಸ್ವೀಕರಿಸಿ ಕೂಡಲೇ ರಸ್ತೆ ಅಗಲೀಕರಣ ಗೊಳಿಸಿ ರೈತರಿಗೆ ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿ ತುಂಬಾ ಕಷ್ಟಕರವಾದ ಸಮಸ್ಯೆಯನ್ನ (ಬೆಣ್ಣೆಯೊಳಗಿನ ಕೂದಲು ತೆಗೆದ ಹಾಗೆ ) ಬಗೆಹರಿಸಿ ರೈತರು ಸುಗಮವಾಗಿ ತಮ್ಮ ಜಮೀನುಗಳಿಗೆ ತೆರಳಲು ಸುಸಜ್ಜಿತವಾದ ರಸ್ತೆ ನಿರ್ಮಿಸಿದರು.ಹೀಗೆ ಕ್ಷೇತ್ರದಲ್ಲಿ ಹಲವಾರು ಜಟೀಲವಾದ ಸಮಸ್ಯೆಗಳನ್ನ ಬಗೆಹರಿಸುತ್ತಾ ಕ್ಷೇತ್ರವನ್ನು ಸಂಚರಿಸಿ ಕ್ಷೇತ್ರದ ಜನರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಸಾರ್ವಜನಿಕರ ಬದುಕಿನಲ್ಲಿ ಭರವಸೆಯನ್ನ ಮೂಡಿಸಿದರು.ಇದರಿಂದಾಗಿ ಇವರ ಕಾರ್ಯವೈಖರಿ ಜನಪರ ಖಾಳಜಿ ಕ್ಷೇತ್ರದ ಜನರ ಮನಸ್ಸಿನಲ್ಲಿ ಆಶಾಭಾವನೆಯನ್ನು ಮೂಡಿಸುವದರ ಜೊತೆಗೆ ಹೆಚ್ಚೆಚ್ಚು ಜನಪ್ರೀಯಗೊಂಡರು.ಶಾಸಕರಾಗಿ ಅಷ್ಟೇ ಅಲ್ಲದೇ ಸನ್ಮಾನ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ವಿವಿಧ ನಿಗಮಗಳ ಅಧ್ಯಕ್ಷರಾಗಿ.ನಿರ್ದೇಶಕರಾಗಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ರಾಜ್ಯದಲ್ಲಿ ಚಿರಪರಿಚಿತರಾದರು.ಅಷ್ಟೇ ಅಲ್ಲದೇ ವಿವಿಧ ಇಲಾಖೆಗಳ ಸಚಿವರಾಗಿ ಕೊಟ್ಟ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿ ಕ್ಷೇತ್ರ ಮತ್ತು ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿ ಮತ್ತೇ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಗಳನ್ನು ಮಾಡತೊಡಗಿದರು. 2011 ರಲ್ಲಿ ಸಾರ್ವಜನಿಕರ ಭೇಟಿಗೆಂದು ನರಗುಂದ ಮತಕ್ಷೇತ್ರದ ಮೆಣಸಗಿ ಗ್ರಾಮಕ್ಕೆ ತೆರಳಿದಾಗ ತಮ್ಮ ಅಂಗರಕ್ಷಕರಿಂದ ಆಕಸ್ಮಿಕವಾಗಿ ಸಾಹೇಬರಿಗೆ ಗುಂಡು ಬಡಿಯಿತು ಗುಂಡು ಬಡಿದಾಗ್ಯೂ ಸಹಿತ ಎದೆಗುಂದದೇ ವೈದ್ಯಕೀಯ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಸಾವನ್ನೇ ಮೆಟ್ಟಿನಿಂತ ಗಂಡುಗಲಿ ಇವರು.ಇವರ ಜನಪರ ಖಾಳಜಿ ಒಳ್ಳೆಯ ಮನಸ್ಥಿತಿಯಿರುವದರಿಂದ ಹಾಗೂ ಕ್ಷೇತ್ರದ ಜನರ ಆಶೀರ್ವಾದ ಹಾರೈಕೆಯಿಂದ ಪುನರ್ಜನ್ಮ ತಾಳಿ ಮತ್ತೆ ಸಾರ್ವಜನಿಕ ಸೇವೆಗೆ ಮುಂದಾದರು.
2018 ರಲ್ಲಿ ಅರಣ್ಯ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಿದ್ದ ಸಂದರ್ಭದಲ್ಲಿ ನಿರಂತರ ಮಳೆಯಿಂದಾಗಿ ಕ್ಷೇತ್ರದ ವಿವಿಧ ಗ್ರಾಮಗಳು ಜಲಾವ್ರತವಾದವು ಅಂತಹ ಸಂದರ್ಭಗಳಲ್ಲಿ ಸನ್ಮಾನ್ಯ ಸಿ ಸಿ.ಪಾಟೀಲ ಸಾಹೇಬರು ಸ್ವತ: ತಾವೇ ಸ್ಥಳಕ್ಕೆ ಭೇಟಿ ನೀಡಿ NDRF ತಂಡವನ್ನು ಕಟ್ಟಿಕೊಂಡು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಅಂತಹ ಕಠೀಣ ಪರುಸ್ಥಿತಿಯಲ್ಲಿ ಜನರ ಮಧ್ಯೆ ನಿಂತು ಜನರಿಗೆ ಆತ್ಮಸ್ಥೈರ್ಯ ತುಂಬುತ್ತಾ ನಾನು ನಿಮ್ಮ ಜೊತೆಗಿದ್ದೇನೆ ಎಂದು ಭರವಸೆಯ ಬೆಳಕನ್ನ ಮೂಡಿಸುವದರ ಜೊತೆಗೆ ನನ್ನ ಕ್ಷೇತ್ರದ ಜನತೆಗೆ ಎಂತಹ ಪರುಸ್ಥಿತಿ ಬಂದೊದಗಿತೆಂದು ಕಂಬನಿ ಮಿಡಿದ ಹ್ರದಯವಂತರಿವರು.
ಅಷ್ಟೇ ಅಲ್ಲದೇ 2019-20ನೇ ಸಾಲಿನಲ್ಲಿ ಸಣ್ಣ ಕೈಗಾರಿಕೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಿದ್ದಂತಹ ಸಂದರ್ಭದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕರೋನ ಎಂಬ ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಧುಮುಕಿ ಜಿಲ್ಲೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಗೂ ಬೆಡ್‌ಗಳ ಕೊರತೆಯಾಗದಂತೆ ನಿಗಾವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡಿರುವದಲ್ಲದೇ ಬಡ ಜನತೆಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿ ತಮ್ಮ ಹ್ರದಯ ವೈಶಾಲತೆ ಮೆರೆದರು.ಅಧಿಕಾರವಿದ್ದಂತಹ ಸಂದರ್ಭದಲ್ಲಿ ಸಾಲು ಸಾಲು ಸವಾಲುಗಳನ್ನ ಸಮರ್ಥವಾಗಿ ಎದುರಿಸುತ್ತಾ ನಿರಂತರವಾಗಿ ಜನಸೇವೆಯಲ್ಲಿ ತಲ್ಲೀನರಾಗಿದ್ದಾರೆ.
2021 ರಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿ ನರಗುಂದ ಮತಕ್ಷೇತ್ರದ ಸರ್ವಾಂಗೀಣ ಅಭಿವ್ರದ್ದಿಗೆ ಪಣತೊಟ್ಟು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಷ್ಟೇ ಅಲ್ಲದೇ ರೈತರ ಜಮೀನುಗಳಿಗೆ ತೆರಳಲೂ ಸಹಿತ ಸುಸಜ್ಜಿತವಾದ ರಸ್ತೆ ನಿರ್ಮಾಣ ಮಾಡಿರುತ್ತಾರೆ.ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಸಮುದಾಯದ ಜನರ ಮನೆ ಮುಂದೆ ಸಿಸಿ ರಸ್ತೆ ನಿರ್ಮಿಸಿರುತ್ತಾರೆ.ಅಷ್ಟೇ ಅಲ್ಲದೇ ಎಸ್ಸಿ ಎಸ್ಟಿ ವಿಶೇಷ ಘಟಕ ಯೋಜನೆಗಳಡಿಯಲ್ಲಿ ದಲಿತ ಕಾಲನಿಗಳಲ್ಲಿ ರಸ್ತೆ ಚರಂಡಿಯಂತಹ ಮೂಲಭೂತ ಸೌಕರ್ಯಗಳನ್ನ ಒದಗಿಸುವದರ ಜೊತೆಗೆ ಸಾಕಷ್ಟು ವಿವಿಧ ಸಮುದಾಯ ಭವನಗಳನ್ನ ನಿರ್ಮಿಸಿದ್ದಾರೆ.ಒಟ್ಟಾರೆಯಾಗಿ ನರಗುಂದ ಮತಕ್ಷೇತ್ರ ಮಾದರೀ ಮತಕ್ಷೇತ್ರವೆಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಮಾಡಿ ಐತಿಹಾಸಿಕ ಬದಲಾವಣೆ ಮಾಡುವದರ ಜೊತೆಗೆ ಇತಿಹಾಸ ಸ್ರಷ್ಟಿಸಿದ್ದಾರೆ.
ಇವರ ಜನಪರ ಯೋಜನೆಗಳು ಅಭಿವ್ರದ್ದಿ ಪರ ಚಿಂತನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ.ಅದಕ್ಕಾಗಿಯೇ ಕಳೆದ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪೊಳ್ಳು ಭರವಸೆಯನ್ನ ಕೊಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡಿ ಘಟಾನುಘಟಿ ನಾಯಕರು ಪರಾರ್ಜಿತಗೊಂಡರೂ ಸನ್ಮಾನ್ಯ ಸಿ ಸಿ.ಪಾಟೀಲ ಸಾಹೇಬರು ಜಯಭೇರಿ ಬಾರಿಸಿರುವದು ಅವರ ಅಭಿವ್ರದ್ದಿ ಕಾರ್ಯಗಳು ಹಾಗೂ ಒಳ್ಳೆಯ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲ ಸಾಹೇಬರು ನೇರ ನುಡಿಯ ನಾಯಕರು.ತಪ್ಪು ಯಾರೇ ಮಾಡಲಿ ಘಂಟಾ ಘೋಷವಾಗಿ ಖಂಡಿಸುತ್ತಾರೆ.ಮುಂದೆ ತಪ್ಪು ಮಾಡದ ಹಾಗೆ ಗಮನ ಹರಿಸಲು ಗುರುವಾಗಿ ಬುದ್ದಿ ಹೇಳುತ್ತಾರೆ.ಆದರೆ ಮಾತ್ರಹ್ರದಯಿ ನಿಷ್ಕಲ್ಮಷ ಮನಸ್ಸಿನ ಹ್ರದಯವಂತರಿವರು.ಆದಕಾರಣ ಗದಗ ಜಿಲ್ಲೆಯಲ್ಲಿ ಸನ್ಮಾನ್ಯ ಶ್ರೀ ಸಿ ಸಿ.ಪಾಟೀಲ ಸಾಹೇಬರ ಬಹಳ ದೊಡ್ಡದಾದ ಅಭಿಮಾನಿ ಬಳಗವಿದೆ.ಅಷ್ಟೇ ಅಲ್ಲದೇ ಜಿಲ್ಲೆಯಿಂದ ಹಿಡಿದು ರಾಜ್ಯದ ಉದ್ದಗಲಕ್ಕೂ ಸಾಕಷ್ಟು ಅಭಿಮಾನಿಗಳನ್ನ ಹೊಂದಿದವರು ನಮ್ಮ ಸಿ ಸಿ.ಪಾಟೀಲ ಸಾಹೇಬರು.
ಇಂತಹ ನಾಯಕರು ನಮ್ಮ ನರಗುಂದ ಮತಕ್ಷೇತ್ರಕ್ಕೆ ದೊರಕಿರುವದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಮುಂಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚು ಜನಪರ ಕಾರ್ಯಗಳನ್ನ ಮಾಡುವದರೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಹೊರಹೊಮ್ಮಿ ನಾಡಿನ ಜನರ ಸೇವೆ ಮಾಡಲು ಅನುಕೂಲ ಕಲ್ಪಿಸಲೆಂದು ಅವರ ಹುಟ್ಟು ಹಬ್ಬದ ಶುಭ ದಿನದಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಸುರೇಶ ವಾಯ್.ಚಲವಾದಿ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಬಿಜೆಪಿ ಎಸ್ಸಿ ಮೋರ್ಚಾ ಗದಗ ಜಿಲ್ಲೆ.ಗದಗ.