ಮೂಸಂಬಿಯನ್ನು ಮೆಡಿಟರೇನಿಯನ್ ಸಿಹಿ ನಿಂಬೆ, ಸಿಹಿ ಲಿಮೆಟ್ಟಾ ಎಂದು ಕರೆಯಲಾಗುತ್ತದೆ.
ಈ ಹಣ್ಣಿನ ರೂಪವು ನಿಂಬೆಹಣ್ಣನ್ನು ಹೋಲುತ್ತದೆಯಾದರೂ ಸ್ವಲ್ಪ ಹುಳಿ ಜತೆಗೆ ಸಿಹಿಯ ರುಚಿಯನ್ನು ಹೊಂದಿದೆ. ಮೂಸಂಬಿಯು ರಿಫ್ರೆಶ್ ರುಚಿ ಅಥವಾ ಸುವಾಸನೆ ಹೊರತಾಗಿ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಮೂಸಂಬಿ ಜ್ಯೂಸ್ ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸುತ್ತದೆ. ಇದರಲ್ಲಿ ಜೀವಸತ್ವಗಳು, ಖನಿಜಾಂಶ, ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಹಾಗಾದ್ರೆ ಮೂಸಂಬಿ ಜ್ಯೂಸ್ ಅನ್ನು ಪ್ರತಿದಿನ ಕುಡಿದ್ರೆ ಆಗುವ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೂಸಂಬಿಯಲ್ಲಿ ವಿಟಮಿನ್ ಸಿ ಹಾಗೂ ನಾರಿನಂಶ ಹೇರಳವಾಗಿದ್ದು ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ.
ಉತ್ತಮ ಜೀರ್ಣಕ್ರಿಯೆ
ಮೂಸಂಬಿ ಜ್ಯೂಸ್ ಜೀರ್ಣಕಾರಿ ರಸ ಮತ್ತು ಪಿತ್ತರಸದ ಉತ್ಫಾದನೆಯನ್ನು ಉತ್ತೇಜಿಸಲು ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯಲ್ಲಿ ಆಮ್ಲವನ್ನು ತಟಸ್ಥಗೊಳಿಸಲು ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.