ಪತ್ರಿಕೋದ್ಯಮ ಪದವೀಧರರಿಗೆ ಮಾಸಿಕ ರೂ.15,000 ಸ್ಟೈಫಂಡ್ ಜತೆಗೆ ತರಬೇತಿ: ಅರ್ಜಿ ಆಹ್ವಾನ

Share
0Shares

ನೀವು ಪ್ರಸಕ್ತ ಸಾಲಿನಲ್ಲಿ ಪತ್ರಿಕೋದ್ಯಮ ಪದವಿ / ಸ್ನಾತಕೋತ್ತರ ಪದವಿ ಪಾಸಾಗಿದ್ದು, ಉದ್ಯೋಗಕ್ಕಾಗಿ ಮುನ್ನೋಡುತ್ತಿದ್ದಲ್ಲಿ, ಇಲ್ಲಿದೆ ನೋಡಿ ಮಾಸಿಕ ಸ್ಟೈಫಂಡ್ ರೂ.15,000 ದೊಂದಿಗೆ ತರಬೇತಿ. ಈಗಲೇ ಅರ್ಜಿ ಸಲ್ಲಿಸಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2024-25ನೇ ಸಾಲಿಗೆ ಪತ್ರಿಕೋದ್ಯಮ ಪದವೀಧರರನ್ನು ತರಬೇತಿಗೆ ನಿಯೋಜನೆ ಮಾಡಿಕೊಳ್ಳಲು ನೋಟಿಫಿಕೇಶನ್ ಹೊರಡಿಸಿದೆ. ಆಫ್ ಲೈನ್ ಮಾದರಿಯಲ್ಲಿ ಅರ್ಜಿ ಆಹ್ವಾನಿಸಿದೆ.

12 ತಿಂಗಳ ಅಪ್ರೆಂಟಿಸ್ ತರಬೇತಿ ಇದಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪತ್ರಿಕೋದ್ಯಮ ಪದವೀಧರರು ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು

  • ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಕನ್ನಡ ಭಾಷೆಯಲ್ಲಿ ಪರಿಣಿತರಾಗಿರಬೇಕು. (ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು)
  • ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು 35 ವರ್ಷದೊಳಗಿರಬೇಕು.
  • ಸೂಚನೆಗಳು
    ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆ, ಸಂಸ್ಥೆಗಳಲ್ಲಿ ಫಲಾನುಭವಿಗಳಾಗಿದ್ದರೆ ಅಂತಹವರು ಅರ್ಜಿ ಸಲ್ಲಿಸುವಂತಿಲ್ಲ.
  • ಸರ್ಕಾರದಿಂದ ಈಗಾಗಲೇ ಈ ತರಬೇತಿ ಸೌಲಭ್ಯ ಪಡೆದ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ
ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ವಾರ್ತಾ ಸೌಧ, 2ನೇ ಮಹಡಿ, ನಂಬರ್ 17, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು – 01 ಇಲ್ಲಿಗೆ ಸಲ್ಲಿಸಬೇಕು.

ಇತರೆ ಹೆಚ್ಚಿನ ವಿವರಕ್ಕೆ ದೂರವಾಣಿ ಸಂಖ್ಯೆ : 080- 22028059, 9480841219.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282