ಜಮಾತ್ ಇ ಇಸ್ಲಾಮಿ ಹಿಂದ್‌ನ ಕೇಂದ್ರ ನಿಯೋಗವು ಉಪಾಧ್ಯಕ್ಷ ಮಲಿಕ್ ಮೊತಸೀಮ್ ಖಾನ್ ನೇತೃತ್ವದಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2024 ಸಂಬಂಧಿಸಿದಂತೆ ನವೆಂಬರ್ 4 ರಂದು ಜೆಪಿಸಿಯನ್ನು ಭೇಟಿ ಮಾಡಿತು.
ನಿಯೋಗವು ಸಮಿತಿಯ ಸದಸ್ಯರಿಗೆ ವಿವರವಾದ ಪ್ರಾತಿನಿಧ್ಯವನ್ನು ನೀಡಿತು. ಪ್ರಸ್ತಾವಿತ ಮಸೂದೆಯ ಪ್ರಮುಖ ಸಮಸ್ಯೆಗಳನ್ನು ಉಲ್ಲೇಖಿಸಿ ವಿವರಿಸಿತು.
ಜೆಐಎಚ್ ಉಪಾಧ್ಯಕ್ಷ ಪ್ರೊ.ಸಲೀಂ ಇಂಜಿನಿಯರ್, ರಾಷ್ಟ್ರೀಯ ಕಾರ್ಯದರ್ಶಿಗಳಾದ ಎಂ.ಡಿ.ಅಬ್ದುರ್ ರಫೀಕ್, ರಹಮತುನ್ನೀಸಾ ಎ. ಕಾರ್ಯದರ್ಶಿ ಇನಾಮ್ ಉರ್ ರೆಹಮಾನ್,ಸಾಮಾಜಿಕ ಕಾರ್ಯಕರ್ತ ಮತ್ತು ಒಬಿಸಿ ನಾಯಕ ಅನ್ಸಾರಿ ಶಬ್ಬೀರ್ ಅಹ್ಮದ್, ನಿಜಾಮ್ ಪಾಷಾ ಮತ್ತು ಅಡ್ವಕೇಟ್ ಜೆಬಾ ಖೈರ್ ಅವರು ನಿಯೋಗದ ಭಾಗವಾಗಿದ್ದರು.
Share