ಅಲ್-ಫುರ್ಖಾನ್ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

Share
0Shares

ಮೂಡುಬಿದಿರೆ: ಅಲ್-ಫುರ್ಖಾನ್ ಸಂಸ್ಥೆಯ ವತಿಯಿಂದ ಸ್ವರಾಜ್ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಜನಾಬ್ ಯು ಟಿ ಅಹಮದ್ ಶರೀಫ್ ಅವರು ವಹಿಸಿಕೊಂಡರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದಿರೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಅವರು, ಕ್ರೀಡೆ ಎಂಬುದು ಮನಸ್ಸಿಗೆ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ರೀಡಾಸ್ಫೂರ್ತಿಯಿಂದ ಆಡಿ ಎಲ್ಲರ ಮನಸ್ಸು ಗೆಲ್ಲಬೇಕು, ಕ್ರೀಡೆಯಲ್ಲಿ ಗೆದ್ದರೆ ಹಿಗ್ಗಬಾರದು ಮತ್ತು ಸೋತರೆ ಕುಗ್ಗಬಾರದು ಎಂದು ಅವರು ಹೇಳಿ ಮಕ್ಕಳಿಗೆ ಶುಭಹಾರೈಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಅದಿಲ್ ಪರ್ವಿಝ್ ಅಧ್ಯಕ್ಷರು ಎಚ್ ಐ ಏಫ್ ಇಂಡಿಯಾ ಮಂಗಳೂರು, ಎಸ್ ಎಮ್ ಸಿ ಸದಸ್ಯರಾದ ಅಬ್ದುಲ್ ರಹಮಾನ್ ಬಾಜಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕ್ರೀಡಾಕೂಟದಲ್ಲಿ ಶಾಲಾ ಹಾಗೂ ಕಾಲೇಜು ವಿಭಾಗದ ತಲಾ ನಾಲ್ಕು ತಂಡಗಳು ಭಾಗವಹಿಸಿದ್ದವು. ವೈಯಕ್ತಿಕ ಸೀನಿಯರ್ ವರ್ಗದಲ್ಲಿ ಮುಬಾರಿಝ್ ಮತ್ತು ಅಜಫತ್ ಅಲಿ ಪಡೆದುಕೊಂಡರೆ, ಜೂನಿಯರ್ ವರ್ಗದಲ್ಲಿ ಮೊಹಮ್ಮದ್ ಹರ್ಮಾನ್ ಹುಸೇನ್, ಎಂ ಡಿ ಫಹಿಮ್, ಅಬ್ದುಲ್ ಮುಸ್ಸವಿರ್ ಹಾಗೂ ಪಿಯುಸಿ ವರ್ಗದ ವೈಯಕ್ತಿಕ ಪ್ರಶಸ್ತಿಯನ್ನು ಹಫಿಝ್ ಪಡೆದುಕೊಂಡರು. ಶಾಲಾ ವಿಭಾಗದ ಚಾಂಪಿಯನ್ ಗಳಾಗಿ ಗ್ರೂಪ್ ರೆಡ್ ಮತ್ತು ಕಾಲೇಜ್ ವಿಭಾಗದ ಚಾಂಪಿಯನ್ ಗಳಾಗಿ ಗ್ರೂಪ್ ಬ್ಲೂ ಗೆದ್ದಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ,ಹಸನ್ ಅಬ್ಬಾಸ್ ಕೊ-ಪ್ರೊಮೊಟರ್ ಫೋರ್ಚೂನ್ ಬಿಲ್ಡರ್ಸ್, ಶೇಕ್ ಮುದ್ದಸ್ಸಿರ್ ಉಮ್ರಿ, ಸಂಸ್ಥೆಯ ಸೈಯೆದ್ ಸೂಹೈಲ್, ಮ್ಯಾನೆಜಿಂಗ್ ಟ್ರಸ್ಟಿ ಮಹಮ್ಮದ್ ಅಶ್ಫಕ್ , ಆಡಳಿತಾಧಿಕಾರಿ ಮಹಮ್ಮದ್ ಶಹಾಮ್, ಅರಬಿಕ್ ಪ್ರಾಂಶುಪಾಲರಾದ ಶೇಕ್ ಅಬ್ದುಲ್ ಮುಸವಿರ್ ಮದನಿ, ಶಾಲೆಯ ಉಪ ಪ್ರಾಂಶುಪಾಲರಾದ ಅಬ್ದುಲ್ ಜಬ್ಬಾರ್, ಟೆಕ್ನಿಕಲ್ ಮುಖ್ಯಸ್ಥ ನೂರ್ ಮಹಮ್ಮದ್, ತರಬೇತುದಾರರಾದ ವಾಸಿಂ ಅಕ್ರಂ ಮತ್ತು ಸಫ್ವಾನ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂದ್ಯಕೂಟದ ನಿರೂಪಣೆಯನ್ನು ಬೋಧಕ ಸಿಬ್ಬಂದಿಗಳಾದ ಮಹಮ್ಮದ್ ನಾಸಿರ್ ಮತ್ತು ಶಕೀಬ್ ಹುಸೇನ್ ಮಾಡಿದ್ದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282