ಗದಗ : ಕರ್ನಾಟಕ ಉಪಚುನಾವಣೆಯಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದು
ಕಳೆದ ಮೂರು ತಿಂಗಳಿಂದ ನಡೆದ ಹಲವಾರು ರಾಜಕೀಯ ಬೆಳವಣಿಗೆಗೆ
ಉತ್ತರವನ್ನು ಜನ ಸಮರ್ಪಕವಾಗಿ ಕೊಟ್ಟು ಬಿಜೆಪಿನವರಿಗೆ ಜನ ಮಂಗಳಾರತಿ ಮಾಡಿದ್ದಾರೆ ಎಂದು
ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ ಹೇಳಿದರು ಅವರು ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.
ಚುನಾವಣೆ ಘೋಷಣೆ ಆಗುತ್ತಿದ್ದಂತೆ, ರಾಜ್ಯದಲ್ಲಿ ಸರ್ಕಾರದ ವಿರುದ್ದ ಸುಳ್ಳು ಪ್ರಚಾರ ನಡೆದವು ನಮ್ಮ ಸಮಾಜವನ್ನು ಒಡೆಯುವ ದೊಡ್ಡ ಹುನ್ನಾರ ವಿರೋಧ ಪಕ್ಷ ಮಾಡಿತು ವಕ್ಫ್ ಹೆಸರಲ್ಲಿ ಸಮಾಜ ಒಡೆಯುವ ಪ್ರಯತ್ನ ಮಾಡಿದರು
ಕಾಂಗ್ರೆಸ್ ಸರ್ಕಾರದ
ಗ್ಯಾರಂಟಿ ಯೋಜನೆ ಕುರಿತು ಪ್ರಧಾನಿಯಿಂದ ಸುಳ್ಳು ಹೇಳಿಸಿದ್ದರು.
ಸಿಎಂ ಅವರನ್ನು ತೇಜೋವಧೆ ಮಾಡುವ ಮೂಲಕ ಸರ್ಕಾರ ಉಳಿಯುವುದಿಲ್ಲ ಸರ್ಕಾರದ ಅಭದ್ರವಾಯಿತು ಸರ್ಕಾರ ಬದಲಾಗುತ್ತೆ ಸರ್ಕಾರದ ಭದ್ರತೆ ಬಗ್ಗೆ ಶಂಕೆ ಮೂಡಿಸಿ ಜನರ ಮನಸ್ಸಿನಲ್ಲಿ ಗೊಂದಲದ ವಾತಾವರಣ ಹುಟ್ಟಿಸಿ
ಲಾಭ ಪಡೆಯುವ ಪ್ರಯತ್ನ ಮಾಡಿದರು
ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳಿದರು ಆದರೆ ಇಂದು ಉಪ ಚುನಾವಣಾ ಫಲಿತಾಂಶ ಜಾಗೃತ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಪಾಳ ಮೋಕ್ಷವನ್ನು ಮಾಡಿದ್ದಾರೆ.
ಜಾಗೃತ ಮತದಾರರಿಗೆ ಪಕ್ಷದ ಪರವಾಗಿ, ವೈಯಕ್ತಿಕವಾಗಿ ರಾಜ್ಯದ ಮೂರು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಎಚ್.ಕೆ ಪಾಟೀಲ.
ಮಹಾರಾಷ್ಟ್ರ ರಾಜ್ಯದ ಚುನಾವಣೆ ಕುರಿತಾಗಿ ಮಾತನಾಡಿದ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ಆದ ಚುನಾವಣಾ ಫಲಿತಾಂಶ ಆಶ್ಚರ್ಯ ಮೂಡಿಸಿದೆ ಪರಿಣಾಮಗಳ ಬಗ್ಗೆ ಅನುಮಾನಾಸ್ಪದದಲ್ಲಿದ್ದೆವೆ ಈ ಬಗ್ಗೆ ಸ್ವಲ್ಪ ಕಾದು ನೋಡಿ ಅವಲೋಕನ ಮಾಡುತ್ತೇವೆ ಇದು ಅವಲೋಕನ ಮಾಡಬೇಕಾದ ಪ್ರಸಂಗ ಎಂದು ಹೇಳಿದರು.
Share