ರೋಣ : ಆರೋಪಿಯೊಬ್ಬ ಸ್ಥಳ ಮಹಜರಿಗೆ ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದನ್ನು ಎಷ್ಟೇ ಬಾಯಿಮಾತಲ್ಲಿ ಹೇಳಿದರು ಕೇಳದೆ ಪದೆ ಪದೆ ಎಸ್ಕೇಪ್ ಆಗಲು ಯತ್ನಿಸುತ್ತಿದ್ದನು ಪೋಲಿಸರ ಮೇಲೆ ಹಲ್ಲೆ ಮಾಡಿ ಓಡಿಹೋಗುವಾಗ ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ನಡೆದಿದೆ.
ಆರೋಪಿ ಬಗರ್ ಅಲಿ ಇರಾನಿ (27) ಅನ್ನುವಾತನ ಮೇಲೆ ಗುಂಡಿನ ದಾಳಿ ನಡೆದಿದ್ದು ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದಾಗ ಗುಂಡಿನ ದಾಳಿ ನಡೆದಿದೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಸಿಪಿಐ ಧೀರಜ್ ಸಿಂಧೆ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ.
ಆರೋಪಿ ಬಗರ್ ಅಲಿ ಮೊಣಕಾಲಿಗೆ ಗಾಯವಾಗಿದೆ ಸದ್ಯ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯಲ್ಲಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಸಿಬ್ಬಂದಿಗಳಾದ ಹನುಮಂತ ಓಲೇಕಾರ, ಅಶೋಕ್ ಗದಗ ಹಲ್ಲೆಗೊಳಲಾಗಿದ್ದಾರೆ.ಸದ್ಯ ಇಬ್ಬರೂ ಪೊಲೀಸರಿಗೂ ರೋಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಆಸ್ಪತ್ರೆಗೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ಹಿನ್ನೆಲೆ:
ಜೂನ್ 28 2023 ರಂದು ಗದಗ ನಗರದ ಬೆಟಗೇರಿ ರೈಲ್ವೇ ಅಂಡರ್ ಬ್ರಿಜ್ ಬಳಿ ಗಂಗಾವತಿ ಪೊಲೀಸರ ಮೇಲೆ ಸಿನಿಮೀಯ ರೀತಿಯಲ್ಲಿ ಆರೋಪಿಗಳ ಗುಂಪೊಂದು ಅಟ್ಯಾಕ್ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರ ಮೇಲೆ ನಡೆದ ಹಲ್ಲೆ ಕೇಸ್ ನಲ್ಲಿ ಆರೋಪಿ ಅರೆಸ್ಟ್ ಆಗಿದ್ದನು ಕಳ್ಳತನದ ಆರೋಪದ ಮೇಲೆ ಗಂಗಾವತಿ ಪೊಲೀಸರು ಗದಗನಿಂದ ಆರೋಪಿ ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದನು ಹಲ್ಲೆ ಬಳಿಕ ಆರೋಪಿ ಸ್ಕೂಟಿಯಲ್ಲಿ ಹೊಳೆಆಲೂರ ಗ್ರಾಮಕ್ಕೆ ಎಸ್ಕೇಪ್ ಆಗಿ, ಅಲ್ಲಿಂದ ಟ್ರೈನ್ ಮೂಲಕ ಮಹಾರಾಷ್ಟ್ರಕ್ಕೆ ತೆರಳಿದ್ದನು ಈ ಹಿನ್ನೆಲೆ ಗಂಗಾವತಿ ಪೊಲೀಸರ ಮೇಲೆ ಹಲ್ಲೆ ಕೇಸ್ ನಲ್ಲಿ ಬೆಟಗೇರಿ ಬಡಾವಣೆ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಇಂದು ಪಂಚನಾಮೆಗೆಂದು ಹೊಳೆಆಲೂರಗೆ ತೆರಳಿ ವಾಪಾಸ್ ಬರುವಾಗ ಈ ಘಟನೆ ನಡೆದಿದೆ.
Share