ನವದೆಹಲಿ: ಪೂಜಾ ಎಸ್ ಎಫ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕನೊಬ್ಬ ರೈಲು ನೀರು ಬಾಟಲಿಯನ್ನು ಖರೀದಿಸಿದ್ದಾರೆ. 15 ರೂಪಾಯಿ ಬಾಟಲಿಯನ್ನು 20 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಪ್ರಶ್ನಿಸಿದರೆ ಇಷ್ಟೇ ಬೇಕಾದರೆ ತಗೊಳಿ ಎಂದು ಮುಂದಕ್ಕೆ ಸಾಗಿದ್ದಾನೆ. ಆದರೆ ಪ್ರಯಾಣಿಕ ವಿಡಿಯೋ ಮೂಲಕ ಮಾಹಿತಿ ನೀಡಿ ಭಾರತೀಯ ರೈಲ್ವೆಗೆ ದೂರು ದಾಖಲಿಸಿದ್ದಾನೆ. ಪರಿಣಾಮ ಭಾರತೀಯ ರೈಲ್ವೇ ವೆಂಡರ್ ಗೆ ಬರೋಬ್ಬರಿ 1 ಲಕ್ಷ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಮಿನಿಸ್ಟ್ರಿ ಆಫ್ ರೈಲ್ವೇಸ್ ಈ ವಿಡಿಯೋವನ್ನು ಹಂಚಿಕೊಂಡು ಮಾಹಿತಿ ನೀಡಿದೆ. ಪ್ರಯಾಣಿಕನೊಬ್ಬ ರೈಲಿನಲ್ಲಿ ನೀರಿನ ಬಾಟಲಿ ಖರೀದಿಸಿದ್ದಾನೆ. ರೈಲು ನೀರಿನ ಬಾಟಲಿ ಬೆಲೆ 15 ರೂಪಾಯಿ. ಆದರೆ 20 ರೂಪಾಯಿಗೆ ವೆಂಡರ್ ಮಾರಾಟ ಮಾಡಿದ್ದಾನೆ. ವಿಡಿಯೋ ಮಾಡುತ್ತಿದ್ದ ಪ್ರಯಾಣಿಕ, ನಾನು 15 ರೂಪಾಯಿ ನೀರಿನ ಬಾಟಲಿಯನ್ನು 20 ರೂಪಾಯಿಗೆ ಖರೀದಿಸಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲ ಈ ಕುರಿತು ದೂರು ನೀಡುವುದಾಗಿ ಎಚ್ಚರಿಸಿದ್ದಾನೆ. ಆದರೆ ಮಾರಾಟಗಾರ ಈ ಮಾತನ್ನು ಲೆಕ್ಕಿಸದೆ ಮುಂದೆ ಸಾಗಿದ್ದಾನೆ. ಪ್ರಯಾಣಿಕ ಭಾರತೀಯ ರೈಲ್ವೇಯ ಸಹಾಯವಾಣಿ 139 ನಂಬರ್ಗೆ ಕರೆ ಮಾಡಿ ದೂರು ನೀಡಿದ್ದಾನೆ. ಕೋಚ್ ನಂಬರ್, ರೈಲಿನ ವಿವರ, ಪ್ರಯಾಣಿಕರ ವಿವರಗಳನ್ನು ದೂರಿನ ವೇಳೆ ನೀಡಿದ್ದಾನೆ. ಕೆಲವೇ ಕ್ಷಣದಲ್ಲಿ ಪ್ರಯಾಣಿಕನ ದೂರು ದಾಖಲಾಗಿದೆ. ದೂರು ದಾಖಲಾದ ಬಳಿಕ ನೀರಿನ ಬಾಟಲಿ ಮಾರಾಟದ ವೆಂಡರ್ ಪಡೆದವರನ್ನು ರೈಲ್ವೇ ಇಲಾಖೆ ಸಂಪರ್ಕಿಸಿದೆ.
Share