ತಿರುವನಂತಪುರಂ: ಕುಡಿದು ವಾಹನ ಚಲಾಯಿಸಿದಕ್ಕಾಗಿ ʼಮಂಜುಮ್ಮೆಲ್ ಬಾಯ್ಸ್ʼ ನಟ ಗಣಪತಿ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ನಟ ಗಣಪತಿ ಮದ್ಯದ ಅಮಲಿನಲ್ಲಿ ಅತಿವೇಗದಿಂದ ತಮ್ಮ ವಾಹನ ಡ್ರೈವ್ ಮಾಡಿಕೊಂಡು ಅಂಗಮಾಲಿಯಿಂದ ಕಲಮಸ್ಸೆರಿಗೆ ಪ್ರಯಾಣಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಅವರು ಸಿಗ್ನಲ್ ಗಳನ್ನು ದಾಟಿಕೊಂಡು ಹೋಗಿದ್ದಾರೆ. ಪೊಲೀಸರು ಅವರ ವಾಹನವನ್ನು ತಡೆ ಹಿಡಿಯಲೂ ಯತ್ನಿಸಿದರೂ ವೇಗವಾಗಿ ಅಲ್ಲಿಂದ ಅವರು ಹೋಗಿದ್ದಾರೆ ಎನ್ನಲಾಗಿದೆ. ಪೊಲೀಸರು ಕಲಮಸ್ಸೆರಿಯಲ್ಲಿ ಅವರನ್ನು ನಿಲ್ಲಿಸಿ ಪರೀಕ್ಷಿಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದ್ದು ಮತ್ತು ಸಂಚಾರ ನಿಯಮದ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಿ, ಬೇಲ್ ಮೇಲೆ ರಿಲೀಸ್ ಮಾಡಲಾಗಿದೆ ಎಂದು ವರದಿಯಾಗಿದೆ.
Share