ವಕ್ಫ್ ಕಾಯ್ದೆ ಕುರಿತು ಅಪಪ್ರಚಾರ. ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಖಂಡನೆ.

Share
0Shares

    ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದಲೂ ಬಿಜೆಪಿ ನಾಯಕರು ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಮತ್ತು ರೈತರನ್ನು ವಕ್ಫ್ ವಿರುದ್ಧ ಎತ್ತಿ ಕಟ್ಟುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪೂರೈಸಲು ಅವರು ವಿಫಲವಾಗಿದ್ದಾರೆಂದು ಅಖಿಲ ಕರ್ನಾಟಕ  ಮುಸ್ಲಿಂ ಮಹಾಸಭಾದ  ರಾಜ್ಯಾಧ್ಯಕ್ಷರಾದ ನ್ಯಾಯವಾದಿ ಮಹ್ಮದಶಫಿ ನಾಗರಕಟ್ಟಿ ಖಂಡಿಸಿದ್ದಾರೆ.

       ಇವರ ಹೋರಾಟ ಬರೀ ಸುಳ್ಳನ್ನು ಆಧರಿಸಿ ನಿಂತಂತಿದೆ. ವಕ್ಫ್ ಬಗ್ಗೆ ನಡೆಯುತ್ತಿರುವ ಪರ ವಿರೋಧಗಳ ನಡುವೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತವನ್ನು ಸುಮಾರು 700 ರಿಂದ 800 ವರ್ಷಗಳವರೆಗೆ ಆಳಿದ ಮುಸಲ್ಮಾನ ಅರಸರು ದಾನ, ದತ್ತಿಗಳನ್ನು ಮಸೀದಿಗಳಿಗಷ್ಟೇ ಅಲ್ಲ, ಮಂದಿರಗಳಿಗೂ ನೀಡಿದ್ದಾರೆ. ಅದೇ ರೀತಿ ಹಿಂದೂ ಅರಸರು ಮಂದಿರಗಳಿಗೆ ಜಮೀನು ನೀಡುವಂತೆ ಮಸೀದಿಗಳಿಗೂ ನೀಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಮೂಲೆಗುಂಪುಗಳಾದ ಕೆಲವು ವ್ಯಕ್ತಿಗಳು ವಕ್ಫ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಕೇವಲ ಪ್ರಚಾರಕ್ಕಾಗಿ ವಕ್ಫ್ ಕುರಿತು ಸುಳ್ಳು ಸುದ್ದಿಯನ್ನು  ಹರಡಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳವ ಕಾರ್ಯ ನಮ್ಮ ರಾಜ್ಯದಲ್ಲಿ ನಡೆದಿದೆ. ದೇಶ ಮತ್ತು ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಪಕ್ಷಗಳಿದ್ದು ಕೇವಲ ಬಿಜೆಪಿ ಪಕ್ಷದವರು ಮಾತ್ರ ವಕ್ಫ್ ಕುರಿತು ಡೋಂಗಿ ಹೋರಾಟ ಮಾಡುತ್ತಿದ್ದಾರೆ. ಈಗ ಬಿಜೆಪಿಯವರು ಹುಟ್ಟುಹಾಕಿರುವ ಗುಮ್ಮನೆಂದರೆ, “ಒಂದು ವೇಳೆ ರೈತರು ಉಳುಮೆ ಮಾಡುತ್ತಿರುವ ಜಮೀನು ವಕ್ಫ್ ಜಮೀನು ಎಂದಾದರೆ ಅವರು ಅದನ್ನು ಕಿತ್ತುಕೊಳ್ಳುತ್ತಾರೆಎಂಬ ಸುಳ್ಳು. ವಕ್ಫ್ ಜಮೀನು ಹೌದೋ ಅಲ್ಲವೋ ಎಂದು ಮೊದಲು ಅದನ್ನು ಸರ್ವೆ ಕಮಿಷನರ್ಪರಿಶೀಲಿಸುತ್ತಾರೆ. ಅದನ್ನು ವಕ್ಫ್ ಆಸ್ತಿ ಎಂದು ಕಮಿಷನರ್ ಘೋಷಿಸಿದ ನಂತರವೂ ವಕ್ಫ್ ಟ್ರಿಬ್ಯುನಲ್ ಮುಂದೆ ತಕರಾರು ಹೂಡಬಹುದು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮತ್ತು ಸುಪ್ರೀಂ ಕೋರ್ಟ್ವರೆಗೂ ದಾವೆ ಹೂಡಲು ಅವಕಾಶವಿದೆ. ಆದರೆ ಈಗ ಬಿಜೆಪಿಯವರು, “ವಕ್ಫ್ ಟ್ರಿಬ್ಯುನಲ್ ತೀರ್ಮಾನಕ್ಕೆ ಕೋರ್ಟಿನಲ್ಲಿ ಅಪೀಲು ಹೋಗಲು ಸಾಧ್ಯವಿಲ್ಲಎಂಬ ಸುಳ್ಳು ಹೇಳುತ್ತಿದ್ದಾರೆ. ವಕ್ಫ್ ತೀರ್ಮಾನಗಳನ್ನು ಹೈಕೋರ್ಟ್‌, ಸುಪ್ರಿಂಕೋರ್ಟಿನಲ್ಲೂ ಪ್ರಶ್ನಿಸಬಹುದಾಗಿದೆ.

 

ದೇಶದ ರಕ್ಷಣಾ ವ್ಯವಸ್ಥೆಯ ಅಧೀನದಲ್ಲಿ 35 ಲಕ್ಷ ಎಕರೆ, ರೈಲ್ವೆ ಇಲಾಖೆಯಲ್ಲಿ 16 ಲಕ್ಷ ಎಕರೆ ಮತ್ತು ವಕ್ಫ್ ಬೋರ್ಡಿನಲ್ಲಿ ವಾಸ್ತವವಾಗಿ 1 ಲಕ್ಷ ಎಕರೆ ಜಮೀನು ಮಾತ್ರ ಇದೆ. ಆದರೆ, ಈಗ ಅದರ ಒಡೆತನದಲ್ಲಿರುವುದು ಕೇವಲ 20ಸಾವಿರ ಎಕರೆ ಮಾತ್ರ. ಕೇವಲ ಎರಡು ರಾಜ್ಯಗಳಲ್ಲಿ ಅಂದರೆ ತಮಿಳುನಾಡು ಮತ್ತು ಆಂಧ್ರದಲ್ಲಿರುವ ದೇವಸ್ಥಾನ, ಮಠಗಳ ಆಸ್ತಿ ಸೇರಿಸಿದರೆ 9ಲಕ್ಷ ಎಕರೆಗೂ ಹೆಚ್ಚಾಗುತ್ತದೆ. ವಕ್ಫ್ ಆಸ್ತಿ ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿರುವುದು ಆ ಧರ್ಮದೊಳಗಿನ ಶ್ರೀಮಂತರು ಮತ್ತು ರಾಜಕಾರಣಿಗಳು. ವಕ್ಫ್ಒಡೆತನ ಹಸ್ತಾಂತರಿಸಲು ಬರುವುದಿಲ್ಲ. ಬಿಜೆಪಿ ನಾಯಕರು ಕೋಮು ಬೆಂಕಿ ಹಚ್ಚುವುದರ ಬದಲು ಅದನ್ನು ನಂದಿಸಲು ಪ್ರಯತ್ನಿಸಲಿ. ಕೊನೆಯ ಪಕ್ಷ ಬೆಂಕಿ ಹಚ್ಚುವ ಮಾತುಗಳಿಗಾದರೂ ವಿರಾಮ ನೀಡಲಿ. ವಕ್ಫ್ ಕಾಯ್ದೆಯಲ್ಲಿ ಹಿಂದೆ ಇದ್ದ ಸರ್ವೆ ಕಮೀಷನರ್, ವಕ್ಫ್ ಬೋರ್ಡ್‌, ವಕ್ಫ್ ಬೋರ್ಡ್ಗೆ ನೇಮಕವಾಗುವ ಅಧಿಕಾರಿ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಮೋದಿ ಸರ್ಕಾರ ತೆಗೆದು ಹಾಕಿದೆ. ವಕ್ಫ್ನಲ್ಲಿ ಕಡ್ಡಾಯವಾಗಿ ಮುಸ್ಲಿಮೇತರರನ್ನು ನೇಮಿಸಬೇಕೆಂದು ಬದಲಾವಣೆ ಮಾಡಲಾಗಿದೆ. ಆದರೆ ಇದೇ ಬಗೆಯ ಷರತ್ತು ಬೇರೆ ಧರ್ಮಗಳ ಸಂಸ್ಥೆಗಳಿಗೆ ಯಾಕಿಲ್ಲ?

 

ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದಲೂ ಬಿಜೆಪಿ ನಾಯಕರು ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವುದು ಮತ್ತು ರೈತರನ್ನು ವಕ್ಫ್ ವಿರುದ್ಧ ಎತ್ತಿ ಕಟ್ಟುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪೂರೈಸಲು ಅವರಿಗೆ ಆಗುತ್ತಿಲ್ಲ. ಇವರ ಹೋರಾಟ ಬರೀ ಸುಳ್ಳನ್ನು ಆಧರಿಸಿ ನಿಂತಂತಿದೆ. ವಕ್ಫ್ ಬಗ್ಗೆ ನಡೆಯುತ್ತಿರುವ ಪರ ವಿರೋಧಗಳ ನಡುವೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೈಗಂಬರರು ನೀರಿಲ್ಲದಾಗ, ಜನರಿಗೆ ಬಾವಿ ತೋಡಿ ಸಮುದಾಯಕ್ಕೆ ಕುಡಿಯುವ ನೀರಿನ ಬಾವಿಯನ್ನು ನೀಡಿದ್ದು ವಕ್ಫ್ ಎನಿಸಿಕೊಂಡಿತು. ಅಲ್ಲಿಂದಲೇ ವಕ್ಫ್ ಆರಂಭವಾಯಿತು ಎನ್ನಬಹುದು. ಭಾರತವನ್ನು ಸುಮಾರು 700ರಿಂದ 800 ವರ್ಷಗಳವರೆಗೆ ಆಳಿದ ಮುಸಲ್ಮಾನ ಅರಸರು ದಾನ, ದತ್ತಿಗಳನ್ನು ಮಸೀದಿಗಳಿಗಷ್ಟೇ ಅಲ್ಲ, ಮಂದಿರಗಳಿಗೂ ನೀಡಿದ್ದಾರೆ. ಅದೇ ರೀತಿ ಹಿಂದೂ ಅರಸರು ಮಂದಿರಗಳಿಗೆ ಜಮೀನು ನೀಡುವಂತೆ ಮಸೀದಿಗಳಿಗೂ ನೀಡಿದ್ದಾರೆ.

 

ರಾಜರುಗಳು ಸಾಮಂತರು ಮತ್ತು ಶ್ರೀಮಂತರು ನೀಡಿದ ದತ್ತಿ ಅಂದರೆ ವಕ್ಫ್ ನಿಯಂತ್ರಣದಲ್ಲಿರುವ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವಂತೆ ಎಲ್ಲ ಧರ್ಮದ ಅಧೀನದಲ್ಲಿರುವ  ಆಸ್ತಿಯನ್ನೂ ಇವರು ರಾಷ್ಟ್ರೀಕರಣ ಮಾಡಲಿ. ಕೇವಲ ಮುಸ್ಲಿಮರ ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಿದರೆ ತಪ್ಪಾಗುತ್ತದೆ.

 

ಹಿಂದಿನ ಕಾಲದಲ್ಲಿ ಹಿಂದೂಮುಸ್ಲಿಂ ಎಂಬ ಭೇದವಿಲ್ಲದೇ ಆ ಧರ್ಮದವರು ಈ ಧರ್ಮದವರಿಗೂ, ಈ ಧರ್ಮದವರು ಆ ಧರ್ಮದವರಿಗೂ ದಾನ ದತ್ತಿಗಳನ್ನು ನೀಡುತ್ತಿದ್ದರು. ಉದಾಹರಣೆಗೆ ಶೃಂಗೇರಿ ಮಠಕ್ಕೆ ದೇವಸ್ಥಾನಕ್ಕೆ ಟಿಪ್ಪು ಸುಲ್ತಾನರು ನೀಡಿದ ದಾನ ದತ್ತಿಗಳಿಲ್ಲವೆ? 19ನೇ ಶತಮಾನದಲ್ಲಿ ಈ ದತ್ತಿಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಿಕೊಂಡರು. 19ನೇ ಶತಮಾನದ ಅಂತ್ಯಕ್ಕೆ ಬ್ರಾಹ್ಮಣರ ತಮಿಳುನಾಡಿದ ಎರಡು ದೇವಸ್ಥಾನಗಳ ಸಂಪತ್ತಿನ ಒಡೆತನದ ವಿಚಾರಕ್ಕೆ ಬಂದ ಸಮಸ್ಯೆಯನ್ನು ಪರಿಹರಿಸಲು ದೇವಸ್ಥಾನದ ಅಡಳಿತ ಮಂಡಳಿಯ ಕೋರಿಕೆಯ ಮೇಲೆ 1913ರಲ್ಲಿ ಹಿಂದುಗಳ ಧಾರ್ಮಿಕ ದತ್ತಿ ನಿಧಿ ಕಾಯ್ದೆ ಹಾಗೂ ವಕ್ಫ್ ಕಾಯ್ದೆಗಳೂ ರೂಪುಗೊಂಡವು. 1995ರಲ್ಲಿ ವಕ್ಫ್ ಟ್ರಿಬ್ಯುನಲ್ ವಕ್ಫ್ ಕಾಯ್ದೆಯಡಿ ರಚನೆಯಾಯಿತು.

 

ಈಗ ಬಿಜೆಪಿಯವರು ಹುಟ್ಟುಹಾಕಿರುವ ಗುಮ್ಮನೆಂದರೆ, “ಒಂದು ವೇಳೆ ರೈತರು ಉಳುಮೆ ಮಾಡುತ್ತಿರುವ ಜಮೀನು ವಕ್ಫ್ ಜಮೀನು ಎಂದಾದರೆ ಅವರು ಅದನ್ನು ಕಿತ್ತುಕೊಳ್ಳುತ್ತಾರೆಎಂಬ ಸುಳ್ಳು. ವಕ್ಫ್ ಜಮೀನು ಹೌದೋ ಅಲ್ಲವೋ ಎಂದು ಮೊದಲು ಅದನ್ನು ಸರ್ವೆ ಕಮಿಷನರ್ಪರಿಶೀಲಿಸುತ್ತಾರೆ. ಅದನ್ನು ವಕ್ಫ್ ಆಸ್ತಿ ಎಂದು ಕಮಿಷನರ್ ಘೋಷಿಸಿದ ನಂತರವೂ ವಕ್ಫ್ ಟ್ರಿಬ್ಯುನಲ್ ಮುಂದೆ ತಕರಾರು ಹೂಡಬಹುದು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಮತ್ತು ಸುಪ್ರೀಂ ಕೋರ್ಟ್ವರೆಗೂ ದಾವೆ ಹೂಡಲು ಅವಕಾಶವಿದೆ. ಆದರೆ ಈಗ ಬಿಜೆಪಿಯವರು, “ವಕ್ಫ್ ಟ್ರಿಬ್ಯುನಲ್ ತೀರ್ಮಾನಕ್ಕೆ ಕೋರ್ಟಿನಲ್ಲಿ ಅಪೀಲು ಹೋಗಲು ಸಾಧ್ಯವಿಲ್ಲಎಂಬ ಸುಳ್ಳು ಹೇಳುತ್ತಿದ್ದಾರೆ. ವಕ್ಫ್ ತೀರ್ಮಾನಗಳನ್ನು ಹೈಕೋರ್ಟ್‌, ಸುಪ್ರಿಂಕೋರ್ಟಿನಲ್ಲೂ ಪ್ರಶ್ನಿಸಬಹುದಾಗಿದೆ.

 

ದೇಶದ ರಕ್ಷಣಾ ವ್ಯವಸ್ಥೆಯ ಅಧೀನದಲ್ಲಿ 35 ಲಕ್ಷ ಎಕರೆ, ರೈಲ್ವೆ ಇಲಾಖೆಯಲ್ಲಿ 16 ಲಕ್ಷ ಎಕರೆ ಮತ್ತು ವಕ್ಫ್ ಬೋರ್ಡಿನಲ್ಲಿ ವಾಸ್ತವವಾಗಿ 1 ಲಕ್ಷ ಎಕರೆ ಜಮೀನು ಮಾತ್ರ ಇದೆ. ಆದರೆ, ಈಗ ಅದರ ಒಡೆತನದಲ್ಲಿರುವುದು ಕೇವಲ 20ಸಾವಿರ ಎಕರೆ ಮಾತ್ರ. ಕೇವಲ ಎರಡು ರಾಜ್ಯಗಳಲ್ಲಿ ಅಂದರೆ ತಮಿಳುನಾಡು ಮತ್ತು ಆಂಧ್ರದಲ್ಲಿರುವ ದೇವಸ್ಥಾನ, ಮಠಗಳ ಆಸ್ತಿ ಸೇರಿಸಿದರೆ 9ಲಕ್ಷ ಎಕರೆಗೂ ಹೆಚ್ಚಾಗುತ್ತದೆ. ವಕ್ಫ್ ಆಸ್ತಿ ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿರುವುದು ಆ ಧರ್ಮದೊಳಗಿನ ಶ್ರೀಮಂತರು ಮತ್ತು ರಾಜಕಾರಣಿಗಳು. ವಕ್ಫ್ಒಡೆತನ ಹಸ್ತಾಂತರಿಸಲು ಬರುವುದಿಲ್ಲ. ಬಿಜೆಪಿ ನಾಯಕರು ಕೋಮು ಬೆಂಕಿ ಹಚ್ಚುವುದರ ಬದಲು ಅದನ್ನು ನಂದಿಸಲು ಪ್ರಯತ್ನಿಸಲಿ. ಕೊನೆಯ ಪಕ್ಷ ಬೆಂಕಿ ಹಚ್ಚುವ ಮಾತುಗಳಿಗಾದರೂ ವಿರಾಮ ನೀಡಲಿ.

            ರೈತರು ದೆಹಲಿಯಲ್ಲಿ ಹೋರಾಟ ನಡೆಸಿದ್ದಾಗ ಅವರು ಧರಣಿ ನಡೆಸದಂತೆ ಕಂದಕ ತೋಡಿ ಮುಳ್ಳಿನ ಬೇಲಿ ಹಾಕಿ, ಹಿಂಸೆ ನೀಡಿ 750 ಜನ ರೈತರ ಸಾವಿಗೆ ಕಾರಣರಾದ ಬಿಜೆಪಿಗರು ಈಗ ರೈತರ ಹಿತೈಷಿಗಳಂತೆ ವರ್ತಿಸುತ್ತಿರುವುದು ಇವರ ಕಪಟ ನೀತಿಗೆ ಸಾಕ್ಷಿಯಾಗಿದೆ. ಈಗ ಅವರು ರೈತರ ಹೆಸರಿನಲ್ಲಿ ಬೂಟಾಟಿಕೆಯ ಹೋರಾಟ ನಡೆಸಿರುವುದು ಹಾಸ್ಯಾಸ್ಪದವಾಗಿದೆ. ತಮ್ಮದೇ ಸ್ವಜಾತಿ ಧರ್ಮದ ನಾಯಕರ ಏಳಿಗೆಯನ್ನೇ ಸಹಿಸದ ಬಸನಗೌಡ ಯತ್ನಾಳ್ 24 ಗಂಟೆ ಅಲ್ಪಸಂಖ್ಯಾತರನ್ನು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪರನ್ನು ಟೀಕಿಸುವುದು, ಸಂವಿಧಾನವನ್ನು  ಬದಲಾವಣೆ ಮಾಡುವ ಹೊನ್ನಾರ್ ಹೊಂದಿರುವ ವ್ಯಕ್ತಿ. ಈ ಹಿಂದೆ ಜಾತ್ಯತೀತ ಜನತಾದಳದಲ್ಲಿದ್ದಾಗ  ಅಲ್ಪಸಂಖ್ಯಾತರ ಉಡುಪ ಧರಿಸಿ  ಮತಯಾಚಿಸಿರುವುದು  ಮತ್ತು  ಪಕ್ಷೇತರವಾಗಿರುವಾಗ  ಮತ್ತೊಂದು ಮಾತಾಡುವುದು ಈಗ ಬಿಜೆಪಿಯಲ್ಲಿರುವಾಗ ಅಲ್ಪಸಂಖ್ಯಾತರನ್ನು  ದ್ವೇಷಿಸುವುದು  ಒಟ್ಟಿನಲ್ಲಿ ನಾಟಕ ಕಂಪನಿ  ಪಾತ್ರದಾರಂತೆ  ಬಣ್ಣ ಬದಲಿಸುವ ಬಸನಗೌಡ ಯತ್ನಾಳರಂತ ನ್ಯಾಯಾಲಯಗಳ ಮೇಲೆ ನಂಬಿಕೆ  ಇಲ್ಲದವರ  ನೇತೃತ್ವದಲ್ಲಿ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ವಕ್ಫ್ ಕಾಯ್ದೆ ಸಂವಿಧಾನದ ಅಡಿಯಲ್ಲಿ ರಚನೆಯಾದ ಕಾಯ್ದೆ ಆಗಿರುವ ಕಾರಣ ಇದನ್ನು ಬದಲಾವಣೆ ಮಾಡುವುದು ಸಂವಿಧಾನ ಬದಲಾವಣೆಗೆ ಮುನ್ನಡೆ ಬರೆದಂತೆ ಆಗುತ್ತದೆಂದು ಅಖಿಲ ಕರ್ನಾಟಕ ಮುಸ್ಲಿಮ ಸಭಾ ಬಿಜೆಪಿಯ ಈ ನಡೆಯನ್ನು ಖಂಡಿಸುತ್ತದೆ.

          

 

         ಮಹ್ಮದಶಫಿ ನಾಗರಕಟ್ಟಿ

              . ರಾಜ್ಯಾಧ್ಯಕ್ಷರು

ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ(ರಿ)

                9538632416

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282