HMPV ವೈರಸ್​ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗ್ರತೆ ಅಗತ್ಯ: ಸಚಿವ ಗುಂಡೂರಾವ್

Share
0Shares

ಬೆಂಗಳೂರು: ಬೆಂಗಳೂರಿನ ಆಸ್ಪತ್ರೆಯಲ್ಲಿ 8 ವರ್ಷದ ಮಗುವಿಗೆ ಹೆಚ್​ಎಂಪಿವಿ ವೈರಸ್ ಸೋಂಕಿಗೆ ಒಳಗಾಗಿರುವುದನ್ನು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಅವರು ಖಚಿತಪಡಿಸಿದ್ದಾರೆ. ಆದರೆ ಇದನ್ನು ಭಾರತದಲ್ಲಿಯೇ ಮೊದಲ ಪ್ರಕರಣ ಎಂದು ಬಣ್ಣಿಸುವುದು ತಪ್ಪು ಎಂದು ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಚ್ಎಂಪಿ ವೈರಸ್ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ, ಆದರೆ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ. ಭಾರತದಲ್ಲಿ ಹೆಚ್ ​​ಎಂಪಿ ವೈರಸ್​ ಇದು ಹೊಸದೇನಲ್ಲ. ಬಹಳ ವರ್ಷಗಳಿಂದ ಹೆಚ್​​ಎಂಪಿ ವೈರಸ್ ವಿಶ್ವದಾದ್ಯಂತ ಇದೆ. ಹೆಚ್​​ಎಂಪಿ ವೈರಸ್​​ನಿಂದ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದಾರೆ. ಚೀನಾದಲ್ಲಿ ಮ್ಯೂಟೆಟ್​ ಆಗಿದೆಯೋ ಏನೋ ನನಗೆ ಗೊತ್ತಿಲ್ಲ. ಚೀನಾದಲ್ಲಿನ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು. ದೇಶದಲ್ಲಿ ಹೆಚ್​​ಎಂಪಿ ವೈರಸ್​ ರೀತಿ ನೂರಾರು ವೈರಸ್​ಗಳಿವೆ. 2001ರಲ್ಲಿ ಪ್ರಥಮ ಬಾರಿಗೆ ಹೆಚ್ ​​ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 ತಿಂಗಳ ಮಗು ನಾರ್ಮಲ್ ಆಗಿದೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಮಗು ಡಿಸ್ಚಾರ್ಜ್​ ಆಗಲಿದೆ ಎಂದು ಹೇಳಿದ್ದಾರೆ. “ಹೆಚ್​ಎಂಪಿವಿ ಮೊದಲಿನಿಂದಲೂ ಸಕ್ರಿಯವಾಗಿರುವ ವೈರಸ್ ಮತ್ತು ನಿರ್ದಿಷ್ಟ ಶೇಕಡಾವಾರು ಜನರು ಈ ವೈರಸ್‌ನಿಂದ ಪ್ರಭಾವಿತರಾಗಿದ್ದಾರೆ. ಇದು ಹೊಸದೇನಲ್ಲ. ವೈರಸ್​ ಕಂಡುಬಂದ ಮಗುವಿಗೆ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲ. ಮಗುವಿನ ಪೋಷಕರು ಸ್ಥಳೀಯ ಜನರಾಗಿದ್ದಾರೆ. ಅವರು ಚೀನಾ ಅಥವಾ ಮಲೇಷ್ಯಾದಿಂದ ಬಂದಿಲ್ಲ” ಎಂದು ಅವರು ಹೇಳಿದರು. ಚೀನಾದಲ್ಲಿ ಹರಡಿರುವ ವೈರಸ್​ ಮತ್ತು ಭಾರತದಲ್ಲಿ ಪತ್ತೆಯಾದ ವೈರಸ್ ನಡುವೆ ಸಂಬಂಧವಿದೆಯೇ ಎಂಬುದನ್ನು ನಿರಾಕರಿಸಿದ ಸಚಿವರು, “ಹೆಚ್​ಎಂಪಿವಿಯ ಹೊಸ ರೂಪಾಂತರದಿಂದಾಗಿ ಚೀನಾದಲ್ಲಿ ಏಕಾಏಕಿ ಸೋಂಕು ಕಂಡುಬಂದಿದೆ. ಅದರ ಬಗ್ಗೆ ನಮಗೆ ಇನ್ನೂ ಯಾವುದೇ ವಿವರಗಳಿಲ್ಲ. ಆದರೆ ಹೆಚ್​ಎಂಪಿವಿ ಬಹಳ ಹಿಂದಿನಿಂದಲೂ ಇದೆ. ಇದು ಶೀತ, ಕೆಮ್ಮು ಮತ್ತು ಜ್ವರದಂತಹ ಸಾಮಾನ್ಯ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಸೀಮಿತ ಸಮಯದ ವೈರಸ್ ಆಗಿದ್ದು, ಸ್ವಲ್ಪ ದಿನಗಳಲ್ಲೇ ಕಡಿಮೆ ಆಗುತ್ತದೆ” ಎಂದು ಸಚಿವ ದಿನೇಶ್​ ಗುಂಡೂರಾವ್ ಮಾಹಿತಿ ನೀಡಿದರು.

Share
0Shares

Leave a Reply

Your email address will not be published. Required fields are marked *

error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282