ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಪವಾಡಪುರುಷ ಶ್ರೀ ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ ಮಂತ್ರ ಮಹರ್ಷಿ ಡಾಕ್ಟರ್ ಸದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಪ್ರತಿವರ್ಷದಂತೆ ಅದ್ದೂರಿಯಾಗಿ ಜರುಗುವುದು. ಜಾತ್ರೆಯ ಉತ್ಸವ ದಿನಾಂಕ 16-01-2025 ರಂದು ಅತಿ ವಿಜ್ರಂಬಣೆಯಿಂದ ಶಂಭುಲಿಂಗೇಶ್ವರ ಮತ್ತು ಭಕ್ತ ಶಿರೋಮಣಿ ಬಸಮ್ಮ ತಾಯಿ ಪಲ್ಲಕ್ಕಿಯೊಂದಿಗೆ ಪ್ರಾರಂಭವಾಗಿ ದಿನಾಂಕ 17-01-2025 ಸಾಯಂಕಾಲ 6:00 ಗಂಟೆಗೆ ಭವ್ಯ ರಥೋತ್ಸವ ಮತ್ತು 18-01-2025 ಐತಿಹಾಸಿಕ ಜಂಗಿ ಕುಸ್ತಿಯೊಂದಿಗೆ ಮುಕ್ತಾಯಗೊಳ್ಳುವುದು.
ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರು ದರ್ಶನ ಪಡೆದು
ಪುನೀತರಾಗಬೇಕೆಂದು ದೇವಸ್ಥಾನ ಪಂಚಕಮಟಿ ಅಧ್ಯಕ್ಷರಾದ ಶ್ರೀ ಸಂಗಪ್ಪ ಪಾಟೀಲ್ ಉಪಾಧ್ಯಕ್ಷರಾದ ಶ್ರೀ ಬಸವರಾಜ್ ಬೋರಾಳೆ ಮತ್ತು ಕಾರ್ಯದರ್ಶಿಗಳಾದ ಶ್ರೀ ವೈಜಿನಾಥ ಹಚ್ಚಿ ತಿಳಿಸಿರುತ್ತಾರೆ.